ಎಚ್‌.ಎಸ್‌.ಮುಕ್ತಾಯಕ್ಕಗೆ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ

Spread the love

ನಮ್ಮ ಸಿಂಧನೂರು, ಜನವರಿ 28
ಕನ್ನಡದ ಪ್ರಮುಖ ಕವಯಿತ್ರಿಯರಲ್ಲಿ ಒಬ್ಬರಾದ ರಾಯಚೂರಿನ ಎಚ್. ಎಸ್. ಮುಕ್ತಾಯಕ್ಕ ಅವರಿಗೆ ಕರ್ನಾಟಕ ಸರ್ಕಾರ ಜೀವಮಾನ ಸಾಧನೆಗಾಗಿ ಮಹಿಳಾ ಸಾಹಿತಿಗಳಿಗೆ ಕೊಡಮಾಡುವ 2023-24ನೇ ಸಾಲಿನ ಪ್ರತಿಷ್ಠಿತ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಯನ್ನು ಘೋಷಿಸಿದೆ. ಗಜಲ್‌ ಸಂಕಲನದ ಮೂಲಕ ಹೆಚ್ಚು ಖ್ಯಾತಿ ಪಡೆದಿರುವ ಮುಕ್ತಾಯಕ್ಕ ಅವರು, ನಾನು ಮತ್ತು ಅವನು, ನಾನು ಮತ್ತು ಅವನು, ನೀವು ಕಾಣಿರೆ, ನೀವು ಕಾಣಿರೆ, ಕಭೀ ಕಭೀ, ತನ್. ಹಾಯಿ, ನಿನಗಾಗಿ ಬರೆದ ಕವಿತೆಗಳು ಕವನ ಸಂಕಲನಗಳು, ನಲವತ್ತು ಗಜಲುಗಳು, ಮೂವತ್ತೈದು ಗಜಲುಗಳು , ನಲವತ್ತೈದು ಗಜಲುಗಳು, “ಮೈಂ ಅವ್ರ ಮೇರೆ ಲಮ್ಹೆ” ( ಸಮಗ್ರ ಗಜಲುಗಳ ಸಂಗ್ರಹ.) ಗಜಲ್‌ ಸಂಕಲನಗಳು ಹಾಗೂ ಶಿವಶರಣಿ ಮುಕ್ತಾಯಕ್ಕ, ಮಕ್ಕಳಿಗಾಗಿ), ಢಕ್ಕೆಯ ಬೊಮ್ಮಣ್ಣ (ಸಂಶೋಧನೆ), ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಗಳು(ವೈಚಾರಿಕ), ಅಪ್ಪ (ಸಂಪಾಧನೆ), ಮದಿರೆಯ ನಾಡಿನಲ್ಲಿ ( ಪ್ರವಾಸಕಥನ), ಅವನು ಮಧು ಸಾವು (ಬಿಡಿ ದ್ವಿಪದಿಗಳ ಸಂಗ್ರಹ) ಕೃತಿಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ.


Spread the love

Leave a Reply

Your email address will not be published. Required fields are marked *