ಭಾರತಾಂಬೆಯ ಯುವ ಸಂತನಿಗೊಂದು ಸಲಾಂ !!

Spread the love

ಭಾರತೀಯರಾದ ನಾವು ಇಂತಹ ಮಹಾನ್ ಆಧ್ಯಾತ್ಮಿಕ ‘ಯುವಸಂತ’ನನ್ನು ಮರೆಯಲು ಸಾಧ್ಯವೇ ? ಅಂದು ಸೆಪ್ಟೆಂಬರ್ ೧೧, ೧೮೯೩ ಅಮೆರಿಕಾದ ಚಿಕಾಗೋ ನಗರದ ಆರ್ಟ್ ಇನ್ಸ್ಟ್ಯೂಟ್ಸ್ ಶಾಶ್ವತ ಸ್ಮಾರಕ ಕಲಾಭವನದಲ್ಲಿ ಸರ್ವಧರ್ಮ ಸಮ್ಮೇಳನವೊಂದನ್ನು ಏರ್ಪಡಿಸಲಾಗಿತ್ತು. ಭಾರತದ ಧಾರ್ಮಿಕ ಪ್ರತಿನಿಧಿಯಾಗಿ ಸ್ವಾಮಿ ವಿವೇಕಾನಂದರು ಭಾಗವಹಿಸಿದ್ದರು. ಇನ್ನುಳಿದಂತೆ ಜಗತ್ತಿನ ಭಾಗಗಳಿಂದ ಬಂದಿದ್ದ, ಆಧ್ಯಾತ್ಮಿಕ ದಾರ್ಶನಿಕರು ಕೂಡ ಪಾಲ್ಗೊಂಡಿದ್ದರು.
ಜಗತ್ತಿನ ಎಲ್ಲಾ ದಾರ್ಶನಿಕರು ತಮ್ಮ ಭಾಷಣಗಳನ್ನು ಸರದಿಯಾಗಿ ಮುಗಿಸುವ ಹೊತ್ತಿಗೆ ಮಧ್ಯಾಹ್ನವಾಗಿತ್ತು. ಅವರೆಲ್ಲರ ಭಾಷಣಗಳನ್ನು ಏಕಚಿತ್ತತೆಯಿಂದ ಆಲಿಸುತ್ತಿದ್ದ ಸ್ವಾಮಿ ವಿವೇಕಾನಂದರು ಮುಂದೆ ತಾವೇನು ಮಾತನಾಡಬೇಕೆಂಬ ಆತಂಕದಲ್ಲಿ ಕುಳಿತಿದ್ದರು. ಆರಂಭದಲ್ಲಿ ವಿದ್ಯಾದೇವತೆಯಾದ ಸರಸ್ವತಿಗೆ ನಮಸ್ಕರಿಸಿ, ಯಾವಾಗ ತಮ್ಮ ಮನಸ್ಸು ಮತ್ತು ದೇಹದಲ್ಲಿ ಹೊಸ ಶಕ್ತಿಯನ್ನು ಕಂಡುಕೊAಡರೋ ಆಗ ‘ಖಿhe souಟ oಜಿ Iಟಿಜiಚಿ’ ಋಷಿಯ ಪ್ರತಿಧ್ವನಿ ಪುನರುತ್ಥಾನಗೊಂಡು ಜ್ಞಾನದ ಹೊಸ ಚೈತನವೊಂದು ನೆರೆದಿದ್ದ ಜನಸಮೂಹವನ್ನು ಉದ್ದೇಶಿಸಿ ‘Sisಣeಡಿs ಚಿಟಿಜ ಃಡಿoಣheಡಿs oಜಿ ಂmeಡಿiಛಿಚಿ’ ಎಂದು ಉದ್ಘರಿಸಿದರು ! ಯಾವಾಗ ಇಂತಹ ಒಂದು ವಿಶೇಷವಾದ ಮಾತು ಅಲ್ಲಿದ್ದ ಜನಸಮೂಹದ ಕಿವಿಗೆ ಬಿತ್ತೋ ನೆರದಿದ್ದ ಇಡೀ ಜನ ಸಮೂಹವೇ ಎರಡು ನಿಮಿಷ ಎದ್ದುನಿಂತು ಕರತಾಡನದೊಂದಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಪುನಃ ಆರಂಭದ ಮೌನ ಸ್ಥಾಪಿತವಾದಾಗ ಸ್ವಾಮಿ ವಿವೇಕಾನಂದರು ತಮ್ಮ ಮಾತುಗಳನ್ನು ಆರಂಭಿಸುತ್ತಾ, ಪಾಶ್ಚಾತ್ಯರಲ್ಲಿದ್ದ ಹಿಂದೂ ಧರ್ಮದ ಬಗೆಗಿನ ಆಸಕ್ತಿಯನ್ನು ಕೆರಳಿಸಿ ‘ಪೂರ್ವದೇಶದ ವಿಚಿತ್ರ ಧರ್ಮ’ವೆಂದು ಪರಿಗಣಿತವಾಗಿದ್ದ ಹಿಂದೂ ಧರ್ಮವನ್ನು, ಅದೇ ಪಾಶ್ಚಾತ್ಯರು ವಿಶಿಷ್ಟ ದೃಷ್ಟಿಕೋನದಲ್ಲಿ ನೋಡುವಂತೆ ಅರ್ಥೈಸಿದರು. ಹಾಗಂತ ವಿವೇಕಾನಂದರು ಭಾರತದಲ್ಲಿ ಹಿಂದೂ ಧರ್ಮವನ್ನು ಹೊಗಳಲಿಲ್ಲ, ಬದಲಾಗಿ ಹಿಂದೂ ಧರ್ಮದಲ್ಲಿನ ಅನಿಷ್ಠ ಪದ್ಧತಿಗಳ ಬಗ್ಗೆ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅವರು ‘ಊiಟಿಜuism shouಟಜ ಡಿeಜಿoಡಿm, iಜಿ ಟಿoಣ, Iಣ ತಿiಟಟ ಛಿoಟಟಠಿses oಟಿ iಣs oತಿಟಿ ತಿeighಣ’ ಎಂದು ಹೇಳಿದ್ದಾರೆ. ಹಾಗಾಗಿ ಇವತ್ತು ಸ್ವಾಮಿ ವಿವೇಕಾನಂದರನ್ನು ಸಮಾಜವಾದಿ ಮತ್ತು ಸಮತಾವಾದಿಗಳು ಕೂಡ ಒಪ್ಪಿಕೊಳ್ಳುತ್ತಾರೆ.
ಇಂತಹ ಮಹಾನ್ ಯುವ ಸಂತ ಶ್ರೀರಾಮಕೃಷ್ಣ ಪರಮಹಂಸರ ಶ್ರೇಷ್ಠ ಶಿಷ್ಯರಾಗಿದ್ದರು. ಮೊದ ಮೊದಲು ಶ್ರೀರಾಮಕೃಷ್ಣರ ಭಾವಪರವಶತೆ ಮತ್ತು ದೂರದೃಷ್ಟಿಯನ್ನು ಕೇವಲ ಕಾಲ್ಪನಿಕ, ಬರಿ ಭ್ರಮೆ ಎಂದು ತಿಳಿದಿದ್ದ ವಿವೇಕಾನಂದರು ಕೊನೆಗೆ ರಾಮಕೃಷ್ಣರ ಜ್ಞಾನ ಭಂಡಾರಕ್ಕೆ ಮನಸೋತು ಸರ್ವಸಂಗ ಪರಿತ್ಯಾಗ ಮಾಡಿ ಅವರನ್ನು ತಮ್ಮ ಗುರುಗಳಾಗಿ ಸ್ವೀಕರಿಸಿದರು. ನಂತರ ರಾಮಕೃಷ್ಣರ ಇತರ ಶಿಷ್ಯರೊಂದಿಗೆ ಸೇರಿ ಗುರುಗಳಂತೆ ನಿಲುವಂಗಿ ಮತ್ತು ಖಾವಿತೊಟ್ಟು ಜನ ಸೇವೆಯೇ ಜನಾರ್ದನನ ಸೇವೆ ಎಂದು ಸಮಾಜ ಕಟ್ಟು ಕಾರ್ಯಕ್ಕೆ ನಿಂತರು.
ಹೀಗೆ ಸ್ವಾಮಿ ವಿವೇಕಾನಂದರು ಕೇವಲ ರಾಮಕೃಷ್ಣ ಪರಮಹಂಸರ ಶಿಷ್ಯರಾಗಿ ಉಳಿಯದೇ ವಿಶ್ವಪರ್ಯಟನೆ ಮಾಡಿ ಭಾರತದ ತತ್ವಜ್ಞಾನ, ಯೋಗ ಮತ್ತು ವೇದಾಂತವನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರಚಾರ ಮಾಡಿದರು. ಎಲ್ಲರಲ್ಲಿಯೂ ದೇವರಿದ್ದು, ಎಲ್ಲರೂ ಸಮಾನರೆಂದ ಮೇಲೆ ಕೆಲವರಿಗೆ ಮಾತ್ರ ಏಕೆ ಹೆಚ್ಚು ಬೆಲೆ ಬರಬೇಕು ಎಂಬ ಪ್ರಶ್ನೆಯನ್ನು ಕೇಳುತ್ತಿದ್ದರು.

ವಿಚಾರಗಳಲ್ಲಿ ವಿವೇಕಾನಂದರು :- ವಿವೇಕಾನಂದರ ನಂಬಿಕೆಗಳಲ್ಲಿ ಮುಖ್ಯವಾದದ್ದು, ನಮ್ಮಲ್ಲಿ ಎಲ್ಲರೂ ಮುಕ್ತರಾಗುವವರೆಗೆ ಯಾರೊಬ್ಬರೂ ಮುಕ್ತರಾಗಲಾರೆಂಬುದು. ವೈಯಕ್ತಿಕ ಮುಕ್ತಿಯ ಆಸೆಯನ್ನು ಬಿಟ್ಟು ಎಲ್ಲರ ಮುಕ್ತಿಗಾಗಿ ಶ್ರಮಿಸುವವನೇ ಪ್ರಬುದ್ಧ ವ್ಯಕ್ತಿ. ಧರ್ಮ ಮತ್ತು ಸರ್ಕಾರದ ನಡುವೆ ಕಟ್ಟುನಿಟ್ಟಾದ ಅಂತರವನ್ನು ಬಯಸಿದ್ದರು. ಸಾಮಾಜಿಕ ಕಟ್ಟಳೆಗಳು ಧರ್ಮದ ಮೂಲಕ ರೂಪುಗೊಂಡಿರುತ್ತವೆಯಾದರೂ ಸರ್ಕಾರಿ ಕೆಲಸಗಳಲ್ಲಿ ಯಾವುದೇ ಒಂದು ಧರ್ಮಕ್ಕೆ ಪ್ರಾಶಸ್ತö್ಯ ಇರಬಾರದು ಎಂಬುದು ಅವರ ನಂಬಿಕೆಯಾಗಿತ್ತು.

ಯುವ ಶಕ್ತಿಗೆ ವಿವೇಕಾನಂದರ ನುಡಿಗಳು :- ಏಳಿ ಎದ್ದೇಳಿ ಗುರಿಮುಟ್ಟುವತನಕ ನಿಲ್ಲದಿರಿ, ಯುವಕರು ಹೇಡಿಗಳಾಗಬಾರದು, ನೀವು ಎಂದೂ ಪರಾವಲಂಬಿಗಳಲ್ಲ. ನಿಮ್ಮ ಬದುಕಿನ ಶಿಲ್ಪಿಗಳು ನೀವೇ. ನಿಮ್ಮ ಮೇಲೆ ನೀವು ನಂಬಿಕೆಯಿಡಿ, ಆಗ ಇಡೀ ಜಗತ್ತೇ ನಿಮ್ಮ ಪಾದದಡಿಯಲ್ಲಿರುತ್ತದೆ. ಇಷ್ಟೆಲ್ಲಾ ಯಾಕೆ ಹೇಳಬೇಕು ಎಂದುಕೊAಡೆನೆAದರೆ ಇವತ್ತು ನಮ್ಮ, ನಿಮ್ಮೆಲ್ಲರ ನೆಚ್ಚಿನ ಯುವ ಸಂತ, ಆಧ್ಯಾತ್ಮಿಕ ಗುರು ಸ್ವಾಮಿ ವಿವೇಕಾನಂದರ ಜನ್ಮದಿನ. ಇಂತಹ ಮಹಾನ್ ನಾಯಕ ಮತ್ತೊಮ್ಮೆ ಹುಟ್ಟಿಬರಲಿ ಎಂದು ಹಾರೈಸುವ ಬದಲು ವಿವೇಕಾನಂದರು ಬದುಕಿ ಮತ್ತು ಬಿಟ್ಟುಹೋಗಿರುವ ಸಂದೇಶಗಳನ್ನು ನಮ್ಮೆಲ್ಲರ ಜೀವನದುದ್ದಕ್ಕೂ ಅಳವಡಿಸಿಕೊಂಡು ಸಾಗುವ ಜೀವನ ನಮ್ಮದಾಗಲಿ ಅಲ್ಲವೇ

  • ಮಿಥುನ್ ಕುಮಾರ್ ವಕೀಲರು, ಸಿಂಧನೂರು

Spread the love

Leave a Reply

Your email address will not be published. Required fields are marked *