ಆನ್‌ಲೈನ್‌ನಲ್ಲಿ ತಾಂತ್ರಿಕ ದೋಷ: ವಲ್ಕಂದಿನ್ನಿ ಹೋಬಳಿ ಬದಲು ‘ಬಾದರ್ಲಿ’ !

Spread the love

ನಮ್ಮ ಸಿಂಧನೂರು, ಫೆಬ್ರವರಿ 7
ಸಿಂಧನೂರು ತಾಲೂಕಿನ ಪುಲದಿನ್ನಿ ಗ್ರಾಮವು ವಲ್ಕಂದಿನ್ನಿ ಹೋಬಳಿ ವ್ಯಾಪ್ತಿಗೆ ಒಳಪಟ್ಟಿದ್ದು, ಈ ಗ್ರಾಮಸ್ಥರು ವಲ್ಕಂದಿನ್ನಿ ನಾಡ ಕಚೇರಿಯಲ್ಲಿ ಆನ್‌ಲೈನ್ ಅಪ್ಲಿಕೇಶನ್ ಹಾಕಲು ಹೋದರೆ (OTC), ಬಾದರ್ಲಿ ಹೋಬಳಿ ಹೆಸರು ತೋರಿಸುತ್ತಿದ್ದು, ತಾಂತ್ರಿಕ ದೋಷದಿಂದಾಗಿ ದಾಖಲೆ ಪತ್ರಗಳಲ್ಲಿ ಅದೇ ಹೆಸರು ನಮೂದಾಗುತ್ತಿದೆ. ಹಾಗಾಗಿ ಕೂಡಲೇ ಈ ಸಮಸ್ಯೆಯನ್ನು ಪರಿಹರಿಸಿ ಅನುಕೂಲ ಕಲ್ಪಿಸುವಂತೆ ಗ್ರಾಮಸ್ಥರು ತಹಸೀಲ್ದಾರ್ ಅವರಿಗೆ ಒತ್ತಾಯಿಸಿದ್ದಾರೆ. ಸಿಂಧನೂರು ತಾಲೂಕಿನ ಪುಲದಿನ್ನಿ ಗ್ರಾಮವು ವಲ್ಕಂದಿನ್ನಿ ಹೋಬಳಿ ವ್ಯಾಪ್ತಿಗೆ ಒಳಪಟ್ಟಿದೆ. ಪುಲದಿನ್ನಿ ಗ್ರಾಮಸ್ಥರು ಯಾವುದೇ ರೀತಿಯ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ವಲ್ಕಂದಿನ್ನಿ ನಾಡ ಕಚೇರಿಯಲ್ಲಿ ಆನ್‌ಲೈನ್ ಅಪ್ಲಿಕೇಶನ್ ಹಾಕುವ ವೇಳೆ ಕಂಪ್ಯೂಟರ್‌ನಲ್ಲಿ ವಲ್ಕಂದಿನ್ನಿ ಹೋಬಳಿ ಹೆಸರು ತೋರಿಸುವ ಬದಲಾಗಿ, ಬಾದರ್ಲಿ ಎಂದು ತಪ್ಪಾಗಿ ತೋರಿಸುತ್ತಿದ್ದು, ಇದರಿಂದ ಗ್ರಾಮಸ್ಥರಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನನುಕೂಲವಾಗಿದೆ. ಜಾತಿ ಮತ್ತು ಆದಾಯ ಪ್ರಮಾಣಪತ್ರ, ವಾಸಸ್ಥಳ ಸೇರಿದಂತೆ ಇನ್ನಿತರೆ ಅಗತ್ಯ ಪ್ರಮಾಣಪತ್ರಗಳನ್ನು ಪಡೆದುಕೊಳ್ಳಲು ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಹೋಬಳಿ ಹೆಸರು ಆನ್‌ಲೈನ್‌ನಲ್ಲಿ ತಪ್ಪು ತೋರಿಸುತ್ತಿರುವುದರಿಂದ ನಾಡ ಕಚೇರಿ ಸಿಬ್ಬಂದಿಗಳು ಹಾಗೂ ಸಾರ್ವಜನಿಕರ ನಡುವೆ ಪರಸ್ಪರ ವಾಗ್ವಾದ ನಡೆಯುವುದು ಸಾಮಾನ್ಯವಾಗಿದೆ. ತುರ್ತು ವೇಳೆಯಲ್ಲಿ ಗ್ರಾಮದ ಕೆಲವರು ಬೇರೆ ದಾರಿಯಿಲ್ಲದೇ ಹಾಗೆಯೇ ದಾಖಲೆ ಪತ್ರಗಳನ್ನು ಪಡೆದುಕೊಂಡಿದ್ದಾರೆ. ಹಲವು ಬಾರಿ ಸಮಸ್ಯೆ ಸರಿಪಡಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ನಿರ್ಲಕ್ಷö್ಯ ವಹಿಸಿದ್ದು, ಇದರಿಂದ ಸಮಸ್ಯೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ತಹಸೀಲ್ದಾರ್ ಅವರು ಈ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *