ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 10
ನಗರದ ಟೌನ್‌ಹಾಲ್‌ನಲ್ಲಿ ಜ.11, 2026 ಭಾನುವಾರದಂದು ಮತದಾರರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವಿರೋಧಿ ಹೋರಾಟ ಸಮಿತಿಯಿಂದ ಬೆಳಿಗ್ಗೆ 10.30 ಗಂಟೆಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಹುಸೇನ್‌ಸಾಬ್, ಚಂದ್ರಶೇಖರ ಗೊರಬಾಳ, ಎಂ.ಗAಗಾಧರ, ಬಸವರಂತರಾಯಗೌಡ ಕಲ್ಲೂರು, ಬಸವರಾಜ ಬಾದರ್ಲಿ ಹಾಗೂ ಜಿಲಾನಿಪಾಷಾ ಅವರು ತಿಳಿಸಿದ್ದಾರೆ.
ಈ ಕುರಿತು ಶನಿವಾರ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂವಾದದಲ್ಲಿ ಖ್ಯಾತ ಸಾಮಾಜಿಕ ಕಾರ್ಯಕರ್ತ ಹಾಗೂ ರಾಜಕೀಯ ಚಿಂತಕ ಶಿವಸುಂದರ್ ಅವರು ಭಾಗವಹಿಸಲಿದ್ದು, ವಿವಿಧ ಎಡ ಪಕ್ಷಗಳ, ಪ್ರಗತಿಪರ, ಜನಪರ ಸಂಘಟನೆಗಳ ಮುಖಂಡರು ಉಪಸ್ಥಿತರಿರುವರು. ಈ ಸಂವಾದ ಕಾರ್ಯಕ್ರಮಕ್ಕೆ ರೈತರು, ಕಾರ್ಮಿಕರು, ವಿದ್ಯಾರ್ಥಿ, ಯುವಜನರು, ಮಹಿಳೆಯರು ಆಗಮಿಸುವಂತೆ ಅವರು ಮನವಿ ಮಾಡಿದ್ದಾರೆ.

