ಸಿಂಧನೂರು: ತುಂಗಭದ್ರಾ ಜಲಾಶಯಕ್ಕೆ 34,421 ಕ್ಯೂಸೆಕ್ ಒಳಹರಿವು, ಭರ್ತಿಯಾಗುವುದು ಗ್ಯಾರಂಟಿ

Spread the love

ನಮ್ಮ ಸಿಂಧನೂರು, ಸೆಪ್ಟೆಂಬರ್ 07
ತುಂಗಭದ್ರಾ ಜಲಾಶಯಕ್ಕೆ ದಿನಾಂಕ:07-09-2024 ಶನಿವಾರದಂದು 34,421 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. 34,181 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಜಲಾಶಯದಲ್ಲಿ ಸದ್ಯ 101.77 ಟಿಎಂಸಿ ನೀರು ಸಂಗ್ರಹವಿದ್ದು, ಒಳಹರಿವಿನ ಪ್ರಮಾಣದಲ್ಲಿ ಸ್ಥಿರತೆ ಇರುವುದರಿಂದ ಜಲಾಶಯ ಭರ್ತಿಯಾಗುವುದು ನಿಚ್ಚಳವಾಗಿದೆ. ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 72.08 ಟಿಎಂಸಿ ನೀರು ಸಂಗ್ರಹವಿತ್ತು.1,266 ಕ್ಯೂಸೆಕ್ ನೀರು ಒಳಹರಿವಿತ್ತು, 8,884 ಕ್ಯೂಸೆಕ್ ನೀರು ಹೊರಗೆ ಹರಿಬಿಡಲಾಗಿತ್ತು. ಕಳೆದ ಆಗಸ್ಟ್ 10ಶನಿವಾರದಂದು ತುಂಗಭದ್ರಾ ಡ್ಯಾಂನ 19 ನೇ ಕ್ರಸ್ಟ್ಗೇಟ್ ಕೊಚ್ಚಿಹೋದ ಪರಿಣಾಮ, ಸ್ಟಾಪ್‌ಲಾಗ್ ಗೇಟ್ ಅಳವಡಿಸುವ ಸಂಬಂಧ ಅಪಾರ ಪ್ರಮಾಣದ ನೀರನ್ನು ನದಿಗೆ ಹರಿಬಿಡಲಾಗಿತ್ತು. ನದಿಗೆ ನೀರು ಹರಿಬಿಟ್ಟರೂ ಪುನಃ ಮತ್ತೊಮ್ಮೆ ಡ್ಯಾಂ ಭರ್ತಿಯಾಗುತ್ತಿರುವುದು ರೈತ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ.


Spread the love

Leave a Reply

Your email address will not be published. Required fields are marked *