ಸಿಂಧನೂರು: ಕುಸಿದ ಡ್ರೈನೇಜ್ ಕಂದಕದಲ್ಲಿ ಸಿಲುಕಿದ ಬೊಲೆರೊ ವಾಹನ !

Spread the love

(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮೇ 13

ನಗರದ ಬಸ್ ನಿಲ್ದಾಣದ ಎದುರುಗಡೆ ಇರುವ ರಸ್ತೆಯಲ್ಲಿ ಸಹನಾ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ಡೈನೇಜ್ ಕುಸಿದ ಪರಿಣಾಮ ಬೊಲೆರೊ ವಾಹನವೊಂದರ ಚಕ್ರ ಕಂದಕದಲ್ಲಿ ಸಿಲುಕಿ ಚಾಲಕ ಪರದಾಡಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಕಳೆದ ಹಲವು ದಿನಗಳಿಂದ ಈ ಮಾರ್ಗದಲ್ಲಿ ಡ್ರೈನೇಜ್ ಕುಸಿದಿದ್ದು, ಕಂದಕ ಉಂಟಾದರೂ ದುರಸ್ತಿ ಮಾಡಿಲ್ಲ. ಈ ಒಳ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಓಡಾಟ ಜಾಸ್ತಿ ಇರುವ ಕಾರಣ ಸಾರ್ವಜನಿಕರು ಬಂಡೆಗಲ್ಲನ್ನು ಅಡ್ಡ ಇಟ್ಟಿದ್ದಾರೆ. ಇದೇ ಮಾರ್ಗದಲ್ಲಿ ಸಾಗುವಾಗ ಡ್ರೈನೇಜ್ ಕುಸಿದಿದ್ದು, ಕಂದಕದಲ್ಲಿ ವಾಹನದ ಚಕ್ರ ಸಿಲುಕಿದೆ.
ಬಸ್ ನಿಲ್ದಾಣದ ಎದುರುಗಡೆ ಇರುವ ಆದರ್ಶ ಕಾಲೋನಿಯ ಕೂಗಳತೆಯ ದೂರದಲ್ಲೇ ಆರೇಳು ಆಸ್ಪತ್ರೆಗಳಿವೆ. ಈ ಒಳ ರಸ್ತೆಗಳಲ್ಲಿ ದಿನವೂ ಸಾವಿರಾರು ಜನರು ಸಂಚರಿಸುತ್ತಾರೆ. ಜನದಟ್ಟಣೆಯ ಜೊತೆಗೆ ವಾಹನ ದಟ್ಟಣೆಯೂ ಇರುತ್ತದೆ. ಹೆಚ್ಚು ಜನರು ಸಂಚರಿಸುವ ಒಳ ರಸ್ತೆಗಳು ಹಾಗೂ ಡ್ರೈನೇಜ್ ಗಳು ಅಧ್ವಾನ ಸ್ಥಿತಿಗೆ ತಲುಪಿದರೂ ಸ್ಥಳೀಯ ಆಡಳಿತವಾಗಲೀ, ಸಂಬAಧಿಸಿದ ಇಲಾಖೆಯವರಾಗಲೀ ಈ ಬಗ್ಗೆ ಗಮನಹರಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

Namma Sindhanuru Click For Breaking & Local News

ಟ್ರಾಫಿಕ್ ಜಾಮ್
ಡ್ರೈನೇಜ್ ಕಂದಕಕ್ಕೆ ಬೊಲೆರೊ ವಾಹನದ ಚಕ್ರ ಸಿಲುಕಿದ್ದರಿಂದ ಮುಖ್ಯ ರಸ್ತೆ ಸೇರಿದಂತೆ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು. “ಕಳೆದ ವರ್ಷದಿಂದ ಈ ಮಾರ್ಗದ ಡ್ರೈನೇಜ್ ಕುಸಿದು ಹೋಗಿದೆ. ಯಾರೋ ಬಂಡೆಗಲ್ಲು ಅಡ್ಡ ಇಟ್ಟಿದ್ದಾರೆ. ಹಲವು ಆಸ್ಪತ್ರೆಗಳಿಗೆ, ಕಾಲೇಜುಗಳಿಗೆ ದಿನವೂ ಈ ಮಾರ್ಗದಲ್ಲಿ ಸಾರ್ವಜನಿಕರು ತಿರುಗಾಡುತ್ತಾರೆ. ಆದರೆ ಸಂಬಂಧಿಸಿದ ಇಲಾಖೆಯವರು ಇದನ್ನು ನೋಡಿಯೂ ಕಣ್ಮುಚ್ಚಿ ಕುಳಿತಿದ್ದಾರೆ. ಅಪಘಾತ ಸಂಭವಿಸಿ, ಇಲ್ಲವೇ ಡ್ರೆöÊನೇಜ್ ಕುಸಿದು ಸಾರ್ವಜನಿಕರ ಜೀವಕ್ಕೆ ಅಪಾಯವಾದರೆ ಯಾರು ಹೊಣೆ” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love

Leave a Reply

Your email address will not be published. Required fields are marked *