ಸಿಂಧನೂರು: ಬೆಂಕಿ ಬಿಸಿಲಿನ ನಡುವೆ ನೆರಳು ಸೂಸುತ್ತಿರುವ ನಗರದ ಮರಗಳು !

Spread the love

(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮೇ 2
ಕಳೆದ ಹಲವು ದಿನಗಳಿಂದ ನಗರ ಸೇರಿದಂತೆ ತಾಲೂಕಿನಾದ್ಯಂತ ಬೆಂಕಿ ಬಿಸಿಲು ಜನಸಾಮಾನ್ಯರಿಗೆ ಚುರುಕು ಮೂಡಿಸುತ್ತಿದೆ. ಈ ನಡುವೆ ನಗರದ ವಿವಿಧ ವಾರ್ಡ್ಗಳಲ್ಲಿ ಅಲ್ಲಲ್ಲಿ ಇರುವ ಮರಗಳು, ಜನಸಾಮಾನ್ಯರಿಗೆ, ದಾರಿಹೋಕರಿಗೆ ನೆರಳಿನ ಆಶ್ರಯ ನೀಡುತ್ತಿವೆ.
ನಗರದ ಪೋಲೀಸ್ ಕ್ವಾರ್ಟರ್ಸ್ ಹಾಗೂ ಲೋಕೋಪಯೋಗಿ ಇಲಾಖೆಯ ಮಧ್ಯದಲ್ಲಿರುವ ರಸ್ತೆಯಲ್ಲಿ ಹತ್ತಾರು ಗಿಡಗಳಿದ್ದು, ಸುಡು ಬಿಸಿಲಲ್ಲೂ ನೆರಳಿನ ಸಿಂಚನ ಮಾಡುತ್ತಿವೆ. ಈ ಮಾರ್ಗದಲ್ಲಿ ಹೋಗುವ ದಾರಿಹೋಕರು ಹಾಗೂ ವಾಹನ ಸವಾರರು ಕೆಲವೊತ್ತು ನಿಂತು ವಿಶ್ರಾಂತಿ ತೆಗೆದುಕೊಂಡು ಹೋಗುತ್ತಿರುವುದು ಕಂಡುಬರುತ್ತಿದೆ. ನಗರ ದಿನದಿಂದ ದಿನಕ್ಕೆ ಬೆಳೆದಂತೆಲ್ಲಾ ಈ ಹಿಂದೆ ಇದ್ದಷ್ಟು ಗಿಡ-ಮರಗಳು ಇಲ್ಲದಂತಾಗಿವೆ. ಹೊಸದಾಗಿ ಗಿಡಗಳನ್ನು ಪೋಷಣೆ ಮಾಡುವುದು ಕಡಿಮೆಯಾಗಿರುವುದರಿಂದ ಅಲ್ಲಲ್ಲಿ ಇರುವ ಗಿಡ-ಮರಗಳು ನಗರದ ಅಂದಕ್ಕೆ ಕಾರಣವಾಗಿವೆ.

Namma Sindhanuru Click For Breaking & Local News

‘ಗಿಡ-ಮರಗಳ ಮಹತ್ವ ಗೊತ್ತಾಗಿದೆ’
“ಸಿಂಧನೂರು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಎಲ್ಲೆಂದರಲ್ಲಿ ಕಾಂಕ್ರೀಟ್ ರಸ್ತೆ ಹೆಚ್ಚಿವೆ. ಈ ಹಿಂದೆ ಸಾರ್ವಜನಿಕ ಪ್ರದೇಶದಲ್ಲಿ ಇದ್ದ ಗಿಡ-ಮರಗಳನ್ನು ಕಡಿದು ಹಾಕಲಾಗಿದೆ. ಇನ್ನೂ ಉದ್ಯಾನಗಳನ್ನು ಕೇಳುವುದೇ ಬೇಡ. ಜಾಗದ ಬೆಲೆ ಗಗನಕ್ಕೇರುತ್ತಿರುವುದರಿಂದ ರಿಯಲ್ ಎಸ್ಟೇಟ್ ಉದ್ಯಮ ಬೃಹತ್ ಆಗಿ ಬೆಳೆಯುತ್ತಿದ್ದು, ಗಿಡ-ಮರಗಳನ್ನು ಕಡಿದು ಹಾಕುವುದು ನಡೆಯುತ್ತಿದೆ. ಈ ನಡುವೆ ಪರಿಸರ ಕಾಳಜಿಯ ಕೊರತೆಯಿಂದಾಗಿ ನಗರದಲ್ಲಿ ವರ್ಷದಿಂದ ವರ್ಷಕ್ಕೆ ಗಿಡ-ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಬಾರಿ ತಾಪಮಾನ ಹೆಚ್ಚಿದ್ದರಿಂದ ಜನರು ಒಂದೇ ಸಮನೆ ಪರಿತಪಿಸುತ್ತಿದ್ದಾರೆ. ಹಾಗಾಗಿ ಗಿಡ-ಮರಗಳ ಶಕ್ತಿ, ಅವುಗಳ ಮಹತ್ವ ಅರ್ಥವಾಗುತ್ತಿದೆ. ರಾತ್ರಿ ವೇಳೆ ಬಿಸಿಗಾಳಿಯಿಂದಾಗಿ ನಿದ್ರೆ ಮಾಡುವುದೇ ಅಪರೂಪ ಎನ್ನುವಂತಾಗಿದೆ. ರಾತ್ರಿ ಕುದಿಯಿಂದಾಗಿ ಬೆಳಗಿನ ಜಾವ ನಿದ್ರೆಗೆ ಜಾರುವಂತಾಗಿದೆ. ಈಗಿರುವ ಗಿಡಗಳು ಇನ್ನಷ್ಟು ದಿನಗಳಲ್ಲಿ ಕ್ಷೀಣಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಆಗ ಸಿಟಿಯಲ್ಲಿನ ವಾತಾವರಣ ಮತ್ತಷ್ಟು ಹದಗೆಡುವುದರಲ್ಲಿ ಅನುಮಾನವೇ ಇಲ್ಲ” ಎಂಬುದು ಸಾರ್ವಜನಿಕರೊಬ್ಬರ ಅಭಿಪ್ರಾಯವಾಗಿದೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *