ನಮ್ಮ ಸಿಂಧನೂರು, ಸೆಪ್ಟೆಂಬರ್ 15
ತಾಲೂಕಿನ ಹಳ್ಳಿ ಹಳ್ಳಿಗಳ ಪ್ರತಿ ಓಣಿಗಳಲ್ಲೂ ಅಕ್ರಮ ಮದ್ಯಮಾರಾಟ ಮಿತಿಮೀರಿದ್ದು, ನಿಯಮಬಾಹಿರವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಹದಿಹರೆಯದವರಿಂದಿಡಿದು ವಯೋವೃದ್ಧರವರೆಗೂ ಹಲವರು ಮದ್ಯವ್ಯಸನಿಗಳಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟುಹೋಗಿದೆ. ಈ ಕೂಡಲೇ ಮದ್ಯ ಅಕ್ರಮ ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಂಡು ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ಆಗ್ರಹಿಸಿ ಕರ್ನಾಟಕ ರೈತ ಸಂಘ (ಎಐಕೆಕೆಎಸ್)ದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಶನಿವಾರ ಮನವಿ ರವಾನಿಸಲಾಯಿತು.
ಅಕ್ರಮ ಮದ್ಯಮಾರಾಟ ಮಾಡುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು, ನಗರದ ಬಾರ್‌ಗಳಿಂದ ಅನಧಿಕೃತವಾಗಿ ಹಳ್ಳಿಗಳಿಗೆ ಮದ್ಯ ಸರಬರಾಜು ಮಾಡುವ ಅಂಗಡಿಗಳ ಲೈಸೆನ್ಸ್ ರದ್ದುಪಡಿಸಬೇಕು, ಡಾಬಾ, ರೆಸ್ಟೋರೆಂಟ್‌ಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಬೇಕು, ಮಾರಾಟ ಮಾಡುವವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು, ಸಿಂಧನೂರು ತಾಲೂಕಿನ ಶ್ರೀಪುರಂಜAಕ್ಷನ್, ಬಪ್ಪೂರು ರಸ್ತೆ, ಪಿಡಬ್ಲುö್ಯಡಿ ಕ್ಯಾಂಪ್ ಕ್ರಾಸ್, ತುರವಿಹಾಳ, ಜಾಲಿಹಾಳಕ್ಯಾಂಪ್, ಅಂಬಾಮಠ, ಪಗಡದಿನ್ನಿ, ಜವಳಗೇರಾ, ತಿಡಿಗೋಳ ಕ್ರಾಸ್ ಹಾಗೂ ಇನ್ನುಳಿದ ರಸ್ತೆಗಳಲ್ಲಿ ಚೆಕ್‌ಪೋಸ್ಟ್ಗಳನ್ನು ನಿರ್ಮಾಣ ಮಾಡಬೇಕು, ಅಬಕಾರಿ ಇಲಾಖೆ ನಿರೀಕ್ಷಕ ಸಿದ್ಧಾರೂಢ ಲಕ್ಕಿಶೆಟ್ಟಿ ಇವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂಬ ಬೇಡಿಕೆಗಳ ಮನವಿಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಪ್ರತಿಭಟನಾಕಾರರು ರವಾನಿಸಿದರು.
ಈ ಸಂದರ್ಭದಲ್ಲಿ ಕೆಆರ್‌ಎಸ್ ತಾಲೂಕು ಅಧ್ಯಕ್ಷ ರಮೇಶ ಪಾಟೀಲ್ ಬೇರಿಗಿ, ಕಾರ್ಯದರ್ಶಿ ಚಿಟ್ಟಿಬಾಬು ಬೂದಿವಾಳಕ್ಯಾಂಪ್, ಟಿಯುಸಿಐ ಜಿಲ್ಲಾಧ್ಯಕ್ಷ ಬಿ.ಎನ್.ಯರದಿಹಾಳ, ಕೆಆರ್‌ಎಸ್ ಮಹಿಳಾ ಘಟಕ ತಾಲೂಕು ಅಧ್ಯಕ್ಷೆ ರೇಣುಕಮ್ಮ ಬೂದಿವಾಳಕ್ಯಾಂಪ್, ತಾಲೂಕು ಕಾರ್ಯದರ್ಶಿ ಮರಿಯಮ್ಮ ಬಸಾಪುರ(ಇಜೆ), ದ್ಯಾವಮ್ಮ.ಟಿ, ಮಲ್ಲೇಶಗೌಡ ಕನ್ನಾರಿ, ಬಾಲಾಜಿ ಉದ್ಬಾಳ, ಉಮೇಶ್ ಉದ್ಬಾಳ್, ಶ್ಯಾಮಣ್ಣ ಟಿ, ಶ್ಯಾಮೀದ್‌ಸಾಬ್, ಯಂಕಪ್ಪ, ಖಾಜಾಹುಸೇನ್, ಹುಸೇನಪ್ಪ, ಶಿವಮ್ಮ ಉದ್ಬಾಳ, ಈರಮ್ಮ, ಶ್ಯಾಮಮ್ಮ, ನಾಗಮ್ಮ ಬೂದಿವಾಳಕ್ಯಾಂಪ್, ಹೊಳಿಯಮ್ಮ, ಶಾಂತಮ್ಮ, ರೋಷನ್‌ಬೇಗಂ, ಅಂಬಮ್ಮ, ರಾಮಲಮ್ಮ, ರಮಾದೇವಿ, ಹುಸೇನಮ್ಮ ಬಸಾಪುರ, ಅಳ್ಳಮ್ಮ ಇತರರು ಭಾಗವಹಿಸಿದ್ದರು.