ಲೋಕಲ್ ವರದಿ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 26
ಬೆಳಕಿನ ಹಬ್ಬ ದೀಪಾವಳಿ ಸಮೀಪಿಸಿರುವುದರಿಂದ ನಗರದ ಮಾರುಕಟ್ಟೆಗೆ ಹಣತೆಗಳು ಲಗ್ಗೆಯಿಟ್ಟಿವೆ. ಕನಕದಾಸ ಸರ್ಕಲ್ ಹಾಗೂ ಸರ್ಕಾರಿ ಆಸ್ಪತ್ರೆಯ ಬಳಿ ತಳ್ಳುಬಂಡಿಯಲ್ಲಿ ಈಗಾಗಲೇ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರು ಹಬ್ಬದ ಮುಂಚಿತವಾಗಿ ಹಣತೆಗಳನ್ನು ಕೊಂಡುಕೊಳ್ಳುತ್ತಿದ್ದಾರೆ. 31.10.2024 ಗುರುವಾರದಂದು ನರಕ ಚತುರ್ದಶಿ, 02.10.2024 ಶನಿವಾರದಂದು ಬಲಿಪಾಡ್ಯಮಿ ಇದ್ದು, ಸಾರ್ವಜನಿಕರು ಹಣತೆಕೊಳ್ಳಲು ಮುಂದಾಗಿದ್ದಾರೆ. ದೊಡ್ಡ ಹಣತೆಗಳು ಜೋಡಿಗೆ 30 ರೂಪಾಯಿ, ಸಣ್ಣ ಹಣತೆಗಳು 80 ರೂಪಾಯಿಗೆ ಡಜನ್ (12), ಇನ್ನೂ ಸಣ್ಣ ಹಣತೆಗಳು 50 ರೂಪಾಯಿಗೆ ಡಜನ್ ದರವನ್ನು ನಿಗದಿಪಡಿಸಲಾಗಿದೆ. ಹೊರ ರಾಜ್ಯದ ಹಣತೆಗಳೇ ಬಹುತೇಕ ಮಾರುಕಟ್ಟೆಗೆ ಬಂದಿವೆ.