ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ನವೆಂಬರ್ 1
ದೀಪಾವಳಿ ಹಬ್ಬ ಕಳೆದ ಬಾರಿಗಿಂತ ಈ ಬಾರಿ ಜೋರಾಗಿದ್ದು, ಮಾರುಕಟ್ಟೆಗಳು ಕಳೆಗಟ್ಟಿವೆ. ನಗರದ ಗಾಂಧಿಸರ್ಕಲ್, ಕನಕದಾಸ ಸರ್ಕಲ್, ಬಸವೇಶ್ವರ ಸರ್ಕಲ್, ಚೆನ್ನಮ್ಮ ಸರ್ಕಲ್ ವ್ಯಾಪ್ತಿಯಲ್ಲಿ ಹೂಹಣ್ಣು, ಬಾಳೆದಿಂಡು, ಕುಂಬಳಕಾಯಿ, ಕಬ್ಬು ಸೇರಿದಂತೆ ಹಬ್ಬಕ್ಕೆ ಅವಶ್ಯವಿರುವ ವಸ್ತುಗಳ ಖರೀದಿ-ಮಾರಾಟ ಪ್ರಕ್ರಿಯೆಯಿಂದಾಗಿ ಜನರಿಂದ ರಸ್ತೆ ಮಾರ್ಗಗಳು ಗಿಜಗುಡುತ್ತಿವೆ. ಈ ನಡುವೆ ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಲು ಜನರು ಬಟ್ಟೆ ಅಂಗಡಿಗಳಿಗೆ ಲಗ್ಗೆಯಿಟ್ಟಿದ್ದು, ಕೆಲವು ಅಂಗಡಿಗಳು ತುಂಬಿ ತುಳುಕುತ್ತಿವೆ. ಇನ್ನೂ ಹಬ್ಬದ ಹಿನ್ನೆಲೆಯಲ್ಲಿ ಕೆಲವು ಅಂಗಡಿಗಳು ರಿಯಾಯಿತಿ, ಡಿಸ್ಕೌಂಟ್ ಘೋಷಿಸಿದ್ದು, ಅತ್ತ ಗ್ರಾಹಕರ ಚಿತ್ತ ನೆಟ್ಟಿದೆ.
ಎಸ್‌ಎಲ್‌ವಿ ಬಟ್ಟೆ ಅಂಗಡಿಗೆ ಮುಗಿಬಿದ್ದ ಯುವ ಗ್ರಾಹಕರು
ನಗರದ ಶಾಹೀನ್ ಹೋಟೆಲ್ ಹಿಂಭಾಗದಲ್ಲಿರುವ ಎಸ್.ಎಲ್.ವಿ ಬಟ್ಟೆ ಅಂಗಡಿಯಲ್ಲಿ ಹಬ್ಬದ ಹಿನ್ನೆಲೆಯಲ್ಲಿ ರಿಯಾಯಿತ ದರದಲ್ಲಿ ಅಂಗಿ, ಪ್ಯಾಂಟು ಸೇರಿದಂತೆ ಇನ್ನಿತರೆ ವಸ್ತುಗಳು ದೊರೆಯುತ್ತಿರುವುದರಿಂದ ಯುವಕರು ಮುಗಿಬಿದ್ದು ಕೊಂಡುಕೊಳ್ಳುತ್ತಿರುವುದು ಶುಕ್ರವಾರ ಕಂಡುಬಂತು. ಕಳೆದ ಮರ‍್ನಾಲ್ಕು ದಿನಗಳಿಂದ ರಿಯಾಯಿತಿ ದರದಲ್ಲಿ ಪ್ಯಾಂಟು, ಶರ್ಟ್ ಸೇರಿದಂತೆ ಪುರುಷರ ಉಡುಪುಗಳನ್ನು ಮಾರಾಟ ಮಾಡಲಾಗುತ್ತಿದ್ದು, ಬೆಳಿಗ್ಗೆಯಿಂದಲೇ ಯುವಕರು ಕಿಕ್ಕಿರಿಯುತ್ತಿದ್ದಾರೆ. “350ರಿಂದ 400 ರೂಪಾಯಿ ಒಳ್ಳೆಯ ಶರ್ಟ್ ದೊರೆಯತ್ತವೆ. ಇನ್ನೂ ಜೀನ್ಸ್ ಪ್ಯಾಂಟುಗಳು ಸಹ ಒಳ್ಳೆಯ ರೇಟಿಗೆ ಸಿಗುತ್ತವೆ. ನನ್ನ ಸ್ನೇಹಿತನೊಬ್ಬ ಹೇಳಿದ್ದರಿಂದ ಹಬ್ಬಕ್ಕಾಗಿ ಪ್ಯಾಂಟು, ಅಂಗಿಯನ್ನು ಖರೀದಿಸಲು ಬಂದಿರುವುದಾಗಿ” ಗ್ರಾಹಕರೊಬ್ಬರು ತಿಳಿಸಿದರು. ಅಂತು ಇಂತೂ ಈ ಬಾರಿಯ ದೀಪಾವಳಿ ಬಟ್ಟೆ ಅಂಗಡಿಗಳ ಮಾಲೀಕರಿಗೆ ಧಮಾಕಾ ಸೃಷ್ಟಿಮಾಡಿದೇ ಎಂದೇ ಹೇಳಬಹುದು.