ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 28
ನಗರದ ತಹಸಿಲ್ ಆಫೀಸ್ ಮುಂಭಾಗ, ಗಾಂಧಿ ಸರ್ಕಲ್ ಏರಿಯಾ ಸೇರಿದಂತೆ ವಿವಿಧೆಡೆ ಪರವಾನಗಿ ಇಲ್ಲದೇ ಹಾಕಿದ್ದ ಬ್ಯಾನರ್‌ಗಳನ್ನು ನಗರಸಭೆ ಸಿಬ್ಬಂದಿ ಸೋಮವಾರ ಮಧ್ಯಾಹ್ನ ತೆರವುಗೊಳಿಸಿದರು. ತೆರವುಗೊಳಿಸಿದ ಬ್ಯಾನರ್, ಇನ್ನಿತರೆ ಬಿದಿರು, ಬಲೀಸು ಸಾಮಗ್ರಿಗಳನ್ನು ನಗರಸಭೆಯ ಟ್ರ್ಯಾಕ್ಟರ್‌ನಲ್ಲಿ ವಿಲೇವಾರಿ ಮಾಡಲಾಯಿತು. ಕೆಲವರು ಪರವಾನಗಿ ಪಡೆಯದೇ ನಗರದ ಸಾರ್ವಜನಿಕ ಪ್ರದೇಶಗಳಲ್ಲಿ ಬ್ಯಾನರ್ ಹಾಕಿದ್ದರಿಂದ ತೆರವುಗೊಳಿಸಲು ಪೌರಾಯುಕ್ತರು ಸೂಚಿಸಿದ್ದಾರೆ, ಈ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗುತ್ತಿದೆ ಎಂದು ನಗರಸಭೆ ಸಿಬ್ಬಂದಿ ತಿಳಿಸಿದ್ದಾರೆ.