ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 9
ನಗರದಲ್ಲಿ ಎರಡು ಕಡೆ ‘ಶಾಸಕರ ಕಾರ್ಯಾಲಯ’ ಎಂದು ನಗರಸಭೆ ವತಿಯಿಂದ ನಾಮಫಲಕ ಅಳವಡಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ತಹಶೀಲ್ ಕಾರ್ಯಾಲಯದ ಆವರಣಕ್ಕೆ ಹೊಂದಿಕೊAಡಿರುವ ಸಹಾಯಕ ಕೃಷಿ ನಿರ್ದೇಶಕರ ಪಕ್ಕದ ಕಟ್ಟಡವೊಂದರ ಮುಂದೆ ನಗರಸಭೆ ವತಿಯಿಂದ ‘ಶಾಸಕರ ಕಾರ್ಯಾಲಯ’ ಎಂಬ ನಾಮಫಲಕ ಹಾಕಲಾಗಿದೆ. ಪ್ರವಾಸಿ ಮಂದಿರ (ಐಬಿ)ದ ಆವರಣದಲ್ಲಿನ ಕೊಠಡಿಯೊಂದರ ಗೋಡೆಗೆ ಶಾಸಕರ ಕಾರ್ಯಾಲಯ ಎಂದು ನಮೂದಿಸಿ ಫಲಕ ಅಳವಡಿಸಲಾಗಿದ್ದು, ನಗರಸಭೆಯಿಂದ ಗೇಟ್ ಮುಂಭಾಗದಲ್ಲಿಯೂ ‘ಶಾಸಕರ ಕಾರ್ಯಾಲಯ’ ಎಂಬ ನಾಮಫಲಕ ಹಾಕಲಾಗಿದೆ. ಹೀಗೆ ಎರಡೂ ಕಡೆ ಒಂದೇ ರೀತಿಯ ನಾಮಫಲಕ ಹಾಕಿರುವುದು ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಶಾಸಕರ ಅಧಿಕೃತ ಕಾರ್ಯಾಲಯ ಯಾವುದು ?
ವಿಧಾನಸಭೆಗೆ ಆಯ್ಕೆಯಾದ ಶಾಸಕರ ಅಧಿಕೃತ ಕಾರ್ಯಾಲಯ ಯಾವುದು ?, ಇದಾ..ಅದಾ ..?! ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ವಿಧಾನ ಪರಿಷತ್ತಿನ ಸದಸ್ಯರ ಕಾರ್ಯಾಲಯ ಯಾವುದು ಎಂದು ಕೇಳುತ್ತಿದ್ದಾರೆ. ಎರಡು ಕಡೆ ಒಂದೇ ರೀತಿಯ ನಾಮಫಲಕಗಳಿರುವುದರಿಂದ ಕ್ಷೇತ್ರದ ನಾಗರಿಕರು ಗೊಂದಲಕ್ಕೊಳಗಾಗಿರುವುದAತೂ ನಿಜ ಎಂದು ಸಾರ್ವಜನಿಕರೊಬ್ಬರು ಹೇಳುತ್ತಾರೆ.

ಗೊಂದಲ ಕಾರಣ ಏನು ?
ಕರ್ನಾಟಕ ವಿಧಾನಸಭೆ ಸದಸ್ಯರನ್ನು ಶಾಸಕರು ಎಂದು ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರನ್ನೂ ಶಾಸಕರು ಎಂದು ಕರೆಯಲಾಗುತ್ತದೆ. ಹೀಗಾಗಿ ಎರಡೂ ಕಡೆ ಶಾಸಕರು ಎಂದು ನಗರಸಭೆ ನಾಮಫಲಕ ಹಾಕಿದೆ. ಆದರೆ ನಾಮಫಲಕದಲ್ಲಿ ಶಾಸಕರು ಕರ್ನಾಟಕ ವಿಧಾನಸಭೆ, ಶಾಸಕರು ವಿಧಾನ ಪರಿಷತ್ತು ಎಂದು ನಮೂದಿಸಿದರೆ ಸಾರ್ವಜನಿಕರ ಗೊಂದಲ ಬಗೆಹರಿಯಲಿದೆ ಎನ್ನುವುದು ಸಂಘಟನೆಯ ಮುಖಂಡರೊಬ್ಬರ ಅಭಿಪ್ರಾಯವಾಗಿದೆ.
