ನಮ್ಮ ಸಿಂಧನೂರು, ಸೆಪ್ಟೆಂಬರ್ 26
ನಗರದ ಸನ್‌ರೈಸ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಫಾರ್ಮಾಸಿಸ್ಟ್ ದಿನಾಚರಣೆ ಹಾಗೂ ನರ್ಸಿಂಗ್ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ, ಡಿ ಫಾರ್ಮಸಿ, ನರ್ಸಿಂಗ್ ಪ್ಯಾರಾ ಮೆಡಿಕಲ್ ಅಂತಿಮ ವರ್ಷದವರಿಗೆ ಬೀಳ್ಕೊಡುಗೆ ಸಮಾರಂಭ ಬುಧವಾರ ನಡೆಯಿತು.
ಉಪ್ಪಾರ ನಂದಿಹಾಳ ಮಠದ ಜಯೇಂದ್ರ ತಾತನವರು ಕಾರ್ಯಕ್ರಮ ಉದ್ಘಾಟಿಸಿದರು. ಸಹಾಯಕ ಜಿಲ್ಲಾ ಔಷಧಿ ನಿಯಂತ್ರಕ ಸಚಿನ್.ಕೆ ಮಾತನಾಡಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಫಾರ್ಮಾಸಿಸ್ಟ್ಗಳ ಪಾತ್ರದ ಕುರಿತು ಸವಿಸ್ತಾರವಾಗಿ ಮಾತನಾಡಿದರು. ಉದಯ ಕಿಶೋರ್, ರಾಯಚೂರಿನ ವಿ.ಎಲ್.ಕಾಲೇಜ್ ಉಪನ್ಯಾಸಕ ಜಹೀರುದ್ದೀನ್, ಸರ್ವೋದಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಅನಿಲ್‌ಕುಮಾರ್, ರಾಯಚೂರಿನ ಪಂಚಮುಖಿ ಬ್ಯಾಂಕಿನ ಅಧ್ಯಕ್ಷ ದತ್ತಾತ್ರೇಯ ಮೇಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ
2023ನೇ ಸಾಲಿನ ಡಿ ಫಾರ್ಮಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಏಳನೇ ರಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಣ ಸಂಸಥೆ ವತಿಯಿಂದ ಹಿರಿಯ ಫಾರ್ಮಾಸಿಸ್ಟ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಸನ್‌ರೈಸ್ ಕಾಲೇಜಿನ ಅಧ್ಯಕ್ಷ ಇರ್ಫಾನ್.ಕೆ ಮಾತನಾಡಿದರು. ನರ್ಸಿಂಗ್ ಕಾಲೇಜ್ ಪ್ರಾಚಾರ್ಯ ಸಿರಿಲ್ ವಂದಿಸಿದರು. ಜಯನಗರ ತಾತನವರು, ಹನುಮೇಶ ತಾತನವರು, ಸಂಸ್ಥೆಯ ಗೌರವ ಅಧ್ಯಕ್ಷ ಖಾಜಾ ಮೈನುದ್ದಿನ್, ಅಧ್ಯಕ್ಷ ಇರ್ಫಾನ್ ಕೆ.ಅತ್ತಾರ, ಬಸವ ಆಸ್ಪತ್ರೆಯ ಡಾ.ಬಸವರಾಜ, ಜೆಸ್ಕಾಂ ಎಇಇ ಶ್ರೀನಿವಾಸ ಗೊಲ್ಲರ್, ಫಾರ್ಮರ್ಸಿ ಪ್ರಾಚಾರ್ಯ ವಾಸಿ ಹುಸೇನ್, ಪ್ಯಾರಾ ಮೆಡಿಕಲ್ ಪ್ರಾಚಾರ್ಯ ಹಾಗೂ ಸಂಸ್ಥೆಯ ಕಾರ್ಯದರ್ಶಿ ಇರ್ಷಾದ್ ಉಪನ್ಯಾಸಕರಾದ ಆಶುಪಾಷಾ, ಬಸವಲಿಂಗ, ರಾಜೇಶ್, ಭಾಗ್ಯಶ್ರೀ, ನಿರ್ಮಲ ಹಾಗೂ ಮನೋಹರ್ ಬಡಿಗೇರ್ ಮೈಲಾಪುರ್, ಪುಟ್ಟರಾಜ್, ಮೆಹಬೂಬ್ ಎಲ್ಲ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.