ಸಿಂಧನೂರು: ನಂ.54ನೇ ಉಪ ಕಾಲುವೆ ತಲುಪಿದ ನೀರು

Spread the love

ನಮ್ಮ ಸಿಂಧನೂರು, ಜುಲೈ 23
ತುಂಗಭದ್ರಾ ಜಲಾಶಯದಿಂದ, ತುಂಗಭದ್ರಾ ಎಡದಂಡೆ ನಾಲೆಗೆ ಜುಲೈ 19 ರಂದು ನೀರು ಹರಿಬಿಡಲಾಗಿದ್ದು, ಮುಖ್ಯ ಕಾಲುವೆಯ ಉಪ ಕಾಲುವೆ ನ.54ಕ್ಕೆ ಮಂಗಳವಾರ ತಲುಪಿವೆ. ಬೆಳಿಗ್ಗೆ 10 ಗಂಟೆಯ ಸುಮಾರು ಕಾಲುವೆಯಲ್ಲಿ 1 ಫೀಟಿಗೂ ಹೆಚ್ಚು ನೀರು ಹರಿಯುವುದು ಕಂಡುಬಂತು. ಮಲೆನಾಡ ಪ್ರದೇಶದಲ್ಲಿ ಭಾರಿ ಪ್ರಮಾಣದ ಮಳೆಯಾದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿರುವುದರಿಂದ ಬೇಗನೇ ಕಾಲುವೆಗೆ ನೀರು ಹರಿಸಲಾಗಿದೆ. ಕಾಲುವೆಗೆ ನೀರು ಬರುವ ಮುನ್ನವೇ ನಂ.54, 55 ಸೇರಿದಂತೆ ಇನ್ನಿತರೆ ಉಪ ಕಾಲುವೆ ವ್ಯಾಪ್ತಿಯ ರೈತರು ಗದ್ದೆಗಳನ್ನು ಹದ ಮಾಡಿದ್ದು, ಈಗಾಗಲೇ ಸಸಿ ಮಡಿ ಹಾಕಿರುವವರು ನೀರು ಬರುತ್ತಿದ್ದಂತೆ ನಾಡಿಗೆ ಸನ್ನದ್ಧಗೊಂಡಿದ್ದಾರೆ.


Spread the love

Leave a Reply

Your email address will not be published. Required fields are marked *