ಸಿಂಧನೂರು : ವಾರ್ಡ್‌ವಾರು ಕಾಂಗ್ರೆಸ್ ಪ್ರಚಾರ, ಅಭ್ಯರ್ಥಿ ಹಿಟ್ನಾಳ್ ಪರ ಮತಯಾಚನೆ

Spread the love

ನಮ್ಮ ಸಿಂಧನೂರು, ಎಪ್ರಿಲ್ 27
ನಗರದಲ್ಲಿ ವಾರ್ಡ್ವಾರು ಪ್ರಚಾರಕ್ಕೆ ಕಾಂಗ್ರೆಸ್ ಮುಂದಾಗಿದ್ದು, ಕಳೆದ ಹಲವು ದಿನಗಳಿಂದ ಬಿರುಸಿನ ಪ್ರಚಾರ ನಡೆಸಲಾಗುತ್ತಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಮತ್ತು ಅವರ ಬೆಂಬಲಿಗರು ನಗರದ ವಾರ್ಡ್ ನಂಬರ್ 6,7,8,9 ಮತ್ತು 10ರ ವ್ಯಾಪಿಯ ಬಡಾವಣೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ, ಬೆಂಬಲಿಗರ ಹಾಗೂ ಸಾರ್ವಜನಿಕರ ಸಭೆ ನಡೆಸಿ, ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪರ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಶಿವಕುಮಾರ ಜವಳಿ ಸೇರಿದಂತೆ ವಿವಿಧ ಘಟಕದ ಪದಾಧಿಕಾರಿಗಳು, ಯುವ ಮುಖಂಡರು ಇನ್ನಿತರರು ಇದ್ದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *