ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು.ಜ.31
ತಾಲೂಕಿನ ಗೋನವಾರ ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಳ್ಳಿ ಸೊಗಡಿನ ಕಾರ್ಯಕ್ರಮ ಸಡಗರ, ಸಂಭ್ರಮದಿಂದ ನಡೆಯಿತು. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಗ್ರಾಮೀಣ-ಉಡುಗೆ-ತೊಡುಗೆಯಲ್ಲಿ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು.
ಈ ಕಾರ್ಯಕ್ರಮವನ್ನು ಜವಳಗೇರಾ ವಲಯದ ಶಿಕ್ಷಣ ಸಂಯೋಜಕ ಹನುಮಂತಪ್ಪ ನಾಯ್ಕರ್ ಉದ್ಘಾಟಿಸಿದರು. ಬಿಆರ್‌ಪಿ ಶಿವಕುಮಾರ್, ರಾಗಲಪರ್ವಿ ಸಿಆರ್‌ಪಿ ಕೇಶವಮೂರ್ತಿ, ನಿವೃತ್ತ ಮುಖ್ಯ ಗುರು ಡಿ.ರುದ್ರಮುನಿ, ಹಿರಿಯ ಮುಖ್ಯಗುರು ಲಿಂಗಯ್ಯ, ವಿಎಸ್‌ಎಸ್‌ಎನ್ ಅಧ್ಯಕ್ಷ ಬಸವರಾಜ ಮಳ್ಳಿ, ಮುಖಂಡ ವೆಂಕಟೇಶ, ಗ್ರಾ.ಪಂ.ಮಾಜಿ ಸದಸ್ಯ ಮಲ್ಲಯ್ಯ ಮ್ಯಾಕಲ್, ವಿರುಪಣ್ಣ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರು ದಿನೇಶಕುಮಾರ್ ಎಂ.ಸಿ ವಹಿಸಿದ್ದರು. ಶಿಕ್ಷಕಿಯರಾದ ಮರಿಬಸಲಿಂಗಮ್ಮ, ಖಾಜಾಬನ್ನಿ ಪ್ರಾರ್ಥಿಸಿದರು. ಶಿಕ್ಷಕ ಇಮಾಮಲಿ ಸ್ವಾಗತಿಸಿದರು. ಶಿಕ್ಷಕ ಈರಣ್ಣ ನಾಯಕ ನಿರೂಪಿಸಿದರು. ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.