ನಮ್ಮ ಸಿಂಧನೂರು, ಅಕ್ಟೋಬರ್ 28
ನಗರದ ಗಂಗಾನಗರದಲ್ಲಿರುವ ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರ ಜನಸ್ಪಂದನಾ ಕಾರ್ಯಾಲಯದಲ್ಲಿ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಅವರನ್ನು ಭಾನುವಾರ ಭೇಟಿಯಾಗಿ ಬಸನಗೌಡ ಬಾದರ್ಲಿ ಅವರೊಂದಿಗೆ ಕೆಲವೊತ್ತು ಚರ್ಚಿಸಿದರು. ಸಮಾಜದ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಇನ್ನಿತರೆ ಹಲವು ವಿಷಯಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು ಎಂದು ಸಮುದಾಯದ ಮುಖಂಡರೊಬ್ಬರು ತಿಳಿಸಿದ್ದಾರೆ. ಈ ಸಂದರ್ಭದಲಿ ವೀರಶೈವ ಲಿಂಗಾಯತ ಸಮುದಾಯದ ತಾಲೂಕು ಘಟಕದ ಅಧ್ಯಕ್ಷ ಪಂಪನಗೌಡ ತಾವರಗೇರಾ, ರಾಜಶೇಖರ್ ಪಾಟೀಲ್, ಹಂಪಯ್ಯ ಸ್ವಾಮಿ, ಅಮರೇಶ್, ಶಿವಕುಮಾರ್ ಜವಳಿ, ವೀರಭದ್ರಪ್ಪ ಗಸ್ತಿ, ವೀರೇಶಪ್ಪ ಮಸ್ಕಿ ಸೇರಿದಂತೆ ಇನ್ನಿತರ ಮುಖಂಡರು ಇದ್ದರು.