ಸಿಂಧನೂರು: ತುಂಗಭದ್ರಾ ಡ್ಯಾಂ ಒಳಹರಿವು 6308 ಕ್ಯೂಸೆಕ್‌ಗೆ ಏರಿಕೆ

Spread the love

ನಮ್ಮ ಸಿಂಧನೂರು, ಜೂನ್ 30
ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 30-06-2024 ಭಾನುವಾರದಂದು 6308 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಜಲಾಶಯದಲ್ಲಿ ಇಂದು 5.79 ಟಿಎಂಸಿ ನೀರು ಸಂಗ್ರಹವಿದ್ದರೆ, 296 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಇದೇ ದಿನ ಕಳೆದ ವರ್ಷ ಜಲಾಶಯದಲ್ಲಿ 3.29 ಟಿಎಂಸಿ ನೀರು ಸಂಗ್ರಹವಿದ್ದರೆ, 343 ಕ್ಯೂಸೆಕ್ ನೀರು ಒಳಹರಿವಿತ್ತು, 2609 ಕ್ಯೂಸೆಕ್ ನೀರು ಹೊರಗೆ ಹರಿಬಿಡಲಾಗಿತ್ತು. ತುಂಗಾ ನದಿ ತುಂಬಿದ್ದು, ಎರಡು ಗೇಟ್‌ಗಳ ಮೂಲಕ ನದಿಗೆ ನೀರು ಹರಿಬಿಟ್ಟಿರುವುದರಿಂದ ಹಾಗೂ ಮಲೆನಾಡ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ನದಿಯ ಒಳಹರಿವು ಹೆಚ್ಚಿದೆ. ಪ್ರಸಕ್ತ ಮಳೆ ವರ್ಷದಲ್ಲಿ ಅತಿ ಹೆಚ್ಚಿನ ಒಳಹರಿವು ಇಂದು ದಾಖಲಾಗಿದೆ. ಮಳೆಯ ಪ್ರಮಾಣ ಹೆಚ್ಚಿದಂತೆ ಒಳಹರಿವು ಹೆಚ್ಚುವ ಸಾಧ್ಯತೆ ಇದೆ.


Spread the love

Leave a Reply

Your email address will not be published. Required fields are marked *