ಸಿಂಧನೂರು: ಜೈಹಿಂದ್ ಉಚಿತ ಆಹಾರ ಕೇಂದ್ರದ ಸೇವಾ ಕಾರ್ಯ ಶ್ಲಾಘನಾರ್ಹ: ಡಾ.ಚನ್ನಬಸವ ಗೊರೇಬಾಳ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 28

ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಕಳೆದ ಎರಡು ವರ್ಷಗಳಿಂದ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ನ ಆಶ್ರಯದಲ್ಲಿ ಉಚಿತ ಆಹಾರ ವಿತರಿಸುತ್ತಿರುವ ಜೈಹಿಂದ್ ಉಚಿತ ಆಹಾರ ಕೇಂದ್ರದ ದಾಸೋಹ ಕಾರ್ಯ ಶ್ಲಾಘನಾರ್ಹ ಎಂದು ಜನನಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಚನ್ನಬಸವ ಗೊರೇಬಾಳ ಹೇಳಿದರು.
“ಜೈ ಹಿಂದ್ ಉಚಿತ ಆಹಾರ ಕೇಂದ್ರ”ದ ಸೇವಾ ಕಾರ್ಯಕ್ಕೆ ಎರಡು ವರ್ಷಗಳಾದ ಹಿನ್ನೆಲೆಯಲ್ಲಿ ನಗರದ ಪಿಡಬ್ಲುö್ಯಡಿ ಕ್ಯಾಂಪಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ನಿರಂತರ ಎರಡು ವರ್ಷಗಳ ಕಾಲ ದಾಸೋಹ ಸೇವೆ ಕೈಗೊಳ್ಳುವುದು ಸುಲಭದ ಮಾತಲ್ಲ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಸಂಕಷ್ಟದ ಪರಿಸ್ಥಿತಿಯನ್ನು ಅರಿತು, ಸಾಲಡಾರಿಟಿ ಯೂತ್ ಮೂವ್‌ಮೆಂಟ್‌ನವರ ಮಾನವೀಯತೆ ಹಾಗೂ ಸೇವಾಮನೋಭಾವದಿಂದ ಈ ಕಾರ್ಯ ನಡೆಸುತ್ತಿರುವುದು ಇತರೆ ಸಂಘಟನೆಗಳವರಿಗೆ ಮಾದರಿಯಾಗಿದೆ” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

Namma Sindhanuru Click For Breaking & Local News

ಸಹಾಯ, ಸಹಕಾರವೇ ನಮಗೆ ಬಲ: ಅಬುಲೈಸ್ ನೈಕ್
ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ನ ಅಧ್ಯಕ್ಷ ಅಬುಲೈಸ್ ನೈಕ್ ಮಾತನಾಡಿ, “ನಮ್ಮ ಸಂಘಟನೆ ಕಳೆದ 2 ವರ್ಷಗಳಿಂದ ನಿರಂತರವಾಗಿ ಸೇವಾಕಾರ್ಯ ಮಾಡಲು ದಾನಿಗಳು, ಸ್ವಯಂಸೇವಕರು ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹಲವರ ಸಹಾಯ, ಸಹಕಾರವಿದೆ ಎಂದು ಸ್ಮರಿಸಿದರು. ಮುಂದಿನ ದಿನಗಳಲ್ಲಿ ಜೈ ಹಿಂದ್ ಉಚಿತ ಆಹಾರ ಕೇಂದ್ರದ ಸೇವೆಯನ್ನು ಇನ್ನಷ್ಟು ವಿಸ್ತರಿಸಿ, ಹೆಚ್ಚು ಅಗತ್ಯವಿರುವ ಜನರಿಗೆ ತಲುಪಿಸುವ ಉದ್ದೇಶವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್‌ನ ಅಧ್ಯಕ್ಷ ಹುಸೇನ್‌ಸಾಬ್, ಮಿಲಾಪ್ ಶಾದಿಮಹಲ್‌ನ ಅಧ್ಯಕ್ಷ ಖಾಜಿ ಜಿಲಾನಿಸಾಬ್, ಮುಖಂಡರಾದ ಮೌಲಾನಾ ತಾಜಿಮುದ್ದೀನ್ ಸಾಬ್, ಬಸವರಾಜ ಬಾದರ್ಲಿ, ಸಿರಾಜ್, ಇಮ್ತಿಯಾಜ್ ಬೇಗ್ ಭಾಗವಹಿಸಿದ್ದರು. ಪ್ರಾಸ್ತಾವಿಕವಾಗಿ ಡಾ.ವಾಸಿಂ ಮಾತನಾಡಿದರು. ತನ್ವೀರ್ ನಿರೂಪಿಸಿದರು. ಇಸ್ಮಾಯಿಲ್, ನಯೀಮ್, ಮನ್ಸೂರ್, ಸನಾವುಲ್ಲಾ, ಖಾಜಾ, ಉಮರ್ ಮತ್ತು ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ನ ಅನೇಕ ಕಾರ್ಯಕರ್ತರು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *