ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 21
ತಾಂತ್ರಿಕ ಕಾರಣದಿಂದ ಶನಿವಾರ ಬಂದ್ ಆಗಿದ್ದ ನಗರದ ತಹಶಿಲ್ ಕಾರ್ಯಾಲಯದ ಆವರಣದಲ್ಲಿರುವ ಆಧಾರ್ ಕಾರ್ಡ್ ಕೇಂದ್ರ ಸೋಮವಾರ ಬೆಳಿಗ್ಗೆಯಿಂದ ಆರಂಭವಾಗಿದೆ. ಶನಿವಾರ ತಾಂತ್ರಿಕ ಕಾರಣದಿಂದ ಬಂದ್ ಆಗಿದ್ದರಿಂದ ಸಾರ್ವಜನಿಕರು ಪರದಾಡಿದ್ದರು. ಆಧಾರ್ ಕೇಂದ್ರ ಬಂದ್ ಆದ ಬಗ್ಗೆ ಸಿಬ್ಬಂದಿ ಸೂಚನಾ ಫಲಕದಲ್ಲಿ ಯಾವುದೇ ನೋಟಿಸ್ ಅಂಟಿಸದ್ದರಿAದ ಬೆಳಿಗ್ಗೆಯೇ ತಾಲೂಕಿನ ವಿವಿಧ ಗ್ರಾಮ ಹಾಗೂ ನಗರದ ವಿವಿಧ ವಾರ್ಡ್ಗಳಿಂದ ಬಂದಿದ್ದ ಸಾರ್ವಜನಿಕರು ಮಧ್ಯಾಹ್ನದವರೆಗೂ ಕಾಯುತ್ತ ಕುಳಿತಿದ್ದರು. ಕೊನೆಗೆ ತಾಂತ್ರಿಕ ಕಾರಣದಿಂದ ಕೇಂದ್ರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಕಂಪ್ಯೂಟರ್ ರಿಪೇರಿಯ ನಂತರ ಆರಂಭಿಸಲಾಗುವುದು ಎಂದು ಹೇಳಿದ ನಂತರ ವಾಪಸ್ ಹೋಗಿದ್ದರು. ಈ ಕುರಿತು ನಮ್ಮ ಸಿಂಧನೂರು ನ್ಯೂಸ್ ವೆಬ್ತಾಣ ದಿನಾಂಕ: 19-10-2024ರಂದು ‘ಆಧಾರ್ ಕಾರ್ಡ್ ಕೇಂದ್ರ ದಿಢೀರ್ ಬಂದ್, ಸಾರ್ವಜನಿಕರ ಪರದಾಟ’ ಶೀರ್ಷಿಕೆಯಡಿ ವರದಿ ಪ್ರಕಟಿಸಿ ಮೇಲಧಿಕಾರಿಗಳು ಗಮನ ಸೆಳೆದಿದ್ದನ್ನು ಸ್ಮರಿಸಬಹುದು.