ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಏಪ್ರಿಲ್ 06
ತುಂಗಭದ್ರಾ ಜಲಾಶಯದಲ್ಲಿ ದಿನಾಂಕ: 06-04-2025 ಭಾನುವಾರ 7.61 ಟಿಎಂಸಿ ನೀರು ಸಂಗ್ರಹವಿದ್ದು, 4,500 ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಒಳಹರಿವಿನ ಪ್ರಮಾಣ ಇಲ್ಲ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 4.29 ಟಿಎಂಸಿ ನೀರು ಸಂಗ್ರಹವಿದ್ದರೆ, 928 ಕ್ಯೂಸೆಕ್ ನೀರನ್ನು ಹೊರಗೆ ಹರಿಬಿಡಲಾಗಿತ್ತು. ಕಳೆದ ಹತ್ತು ವರ್ಷದ ಹಿಂದೆ ಇದೇ ದಿನ ಜಲಾಶಯದಲ್ಲಿ 6.55 ಟಿಎಂಸಿ ನೀರು ಸಂಗ್ರಹವಿದ್ದದ್ದು ದಾಖಲಾಗಿದೆ.