ಸಿಂಧನೂರು: ತಹಸೀಲ್ ಕಚೇರಿ ಆವರಣದ ಗಿಡಗಳಿಗೆ ನೀರು ಹಾಕೋರು ಯಾರು ?

Spread the love

ನಮ್ಮ ಸಿಂಧನೂರು, ಫೆಬ್ರವರಿ 16
ತಹಸೀಲ್ ಕಚೇರಿ ನಗರದ ಹೃದಯ ಭಾಗದಲ್ಲಿದ್ದು ಇಲ್ಲಿಗೆ ದಿನವೂ ಸಾವಿರಾರು ಜನರು ಬಂದೋಗುತ್ತಾರೆ. ಸಾರ್ವಜನಿಕರ ಮುಂದೆಯೇ ಆವರಣದಲ್ಲಿರುವ ಗಿಡ-ಮರಗಳು ನೀರಿಲ್ಲದೇ ದಿನದಿಂದ ದಿನಕ್ಕೆ ಒಣಗಿ ಹೋಗುತ್ತಿದ್ದು, ಈ ಗಿಡಗಳಿಗೆ ನೀರು ಹಾಕೋರು ಯಾರು ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ತಹಸೀಲ್ ಕಾರ್ಯಾಲಯದ ಗಿಡ-ಮರಗಳಿಗೆ ಸರಿಯಾದ ಸಮಯಕ್ಕೆ ನಿರುಣಿಸದೇ ಇರುವುದು ಅವುಗಳು ಒಣಗುತ್ತಿರುವುದೇ ಸಾಕ್ಷಿಯಾಗಿದೆ.

Namma Sindhanuru Click For Breaking & Local News

ಮಿನಿ ವಿಧಾನಸೌಧಕ್ಕೆ ದಿನವೂ ಸಾವಿರಾರು ಜನರು ಭೇಟಿ ಕೊಡುವುದರಿಂದ ಜನ ಜಂಗುಳಿಯ ತಾಣವಾಗಿದೆ. ಒಳಾವರಣದಲ್ಲಿ ಅಷ್ಟೊಂದು ಜನರು ಕುಳಿತುಕೊಳ್ಳಲು ಜಾಗವಿಲ್ಲ. ಹಾಗಾಗಿ ಬೇಸಿಗೆಯ ಸಂದರ್ಭದಲ್ಲಿ ಆವರಣದಲ್ಲಿರುವ ಗಿಡ-ಮರಗಳು ಸಾರ್ವಜನಿಕರು ಕುಳಿತುಕೊಳ್ಳಲು ಆಸರೆಯಾಗಿವೆ. ಇಲ್ಲದೇ ಹೋದರೆ ಆಸರೆ ಪಡೆಯಲು ಪರದಾಡಬೇಕಾದ ಪರಿಸ್ಥಿತಿ ಇತ್ತು.

Namma Sindhanuru Click For Breaking & Local News

“ತಹಸೀಲ್ ಕಾರ್ಯಾಲಯದ ಸಿಬ್ಬಂದಿ ಗಿಡ-ಮರಗಳಿಗೆ ನೀರು ಹಾಕಿ ಪೋಷಣೆ ಮಾಡಬೇಕಿದೆ. ಆದರೆ ಅವರು ಕೈಚೆಲ್ಲಿ ಕುಳಿತಿದ್ದಾರೆ. ಹೀಗಾದರೆ ಬಿರುಬೇಸಿಗೆಯಿಂದ ಗಿಡಗಳು ಒಣಗಿ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ”ಎಂದು ತಹಸೀಲ್ ಕಾರ್ಯಾಲಯಕ್ಕೆ ಕೆಲಸದ ನಿಮಿತ್ತ ಆಗಮಿಸಿದ ಸಾರ್ವಜನಿಕರೊಬ್ಬರು ತಿಳಿಸಿದರು. “ತಹಸೀಲ್ ಕಾರ್ಯಾಲಯದ ಆವರಣದಲ್ಲಿಯೇ ಈ ಪರಿಸ್ಥಿತಿಯಾದರೆ ಉಳಿದ ಕಡೆ ಹೇಗೆ, ಪ್ರತಿ ವರ್ಷ ಜೂನ್ 5ರ ಪರಿಸರ ದಿನಾಚರಣೆಯೆಂದು ಗಿಡ-ಮರಗಳ ರಕ್ಷಣೆ, ಪೋಷಣೆಗೆ ಮೈಕು ಹಿಡಿದು ಪುಂಖಾನು-ಪುಂಖವಾಗಿ ಭಾಷಣ ಬಿಗಿಯುವ ಅಧಿಕಾರಿಗಳು, ಜನಪ್ರತಿನಿಧಿಗಳ ಕಣ್ಗಾವಲಿನ ಕಚೇರಿಗಳಲ್ಲಿಯೇ ಇಂತಹ ಪರಿಸ್ಥಿತಿಯಾದರೆ ಯಾರೂ ಕೇಳುವವರಿಲ್ಲದ ಕಡೆ ಇನ್ನೇಗೆ” ಎಂದು ಸಾರ್ವಜನಿಕರೊಬ್ಬರು ಪ್ರಶ್ನಿಸುತ್ತಾರೆ.

Namma Sindhanuru Click For Breaking & Local News
Namma Sindhanuru Click For Breaking & Local News
Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *