ಸಿಂಧನೂರು: ಸುಕ್ಷೇತ್ರ ಅಂಬಾಮಠ ಅಂಬಾದೇವಿ ಜಾತ್ರೆಗೆ ಅದ್ಧೂರಿ ಚಾಲನೆ, ಭಕ್ತರನ್ನು ಆಕರ್ಷಿಸಿದ ಸಾಂಸ್ಕೃತಿಕ ಕಲರವ

Spread the love

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 3

ಸುಕ್ಷೇತ್ರ ಅಂಬಾಮಠದ ಅಂಬಾದೇವಿ ದೇವಸ್ಥಾನದ ಜಾತ್ರೆಗೆ ಶುಕ್ರವಾರ ಸಂಜೆ ವಿವಿಧ ಮಠಾಧೀಶರು ಹಾಗೂ ಶಾಸಕ ಹಂಪನಗೌಡ ಬಾದರ್ಲಿ ಅವರ ನೇತೃತ್ವದಲ್ಲಿ ಅದ್ಧೂರಿ ಚಾಲನೆ ದೊರೆಯಿತು. ತದನಂತರ ಭಕ್ತಿಸುಧೆ, ಸಾಂಸ್ಕೃತಿಕ ನೃತ್ಯ ಹಾಗೂ ಹಾಸ್ಯ ನಾಟಕ ಪ್ರದರ್ಶನಗಳು ಭಕ್ತರನ್ನು ಆಕರ್ಷಿಸಿದವು.

Namma Sindhanuru Click For Breaking & Local News

ಭಕ್ತರನ್ನು ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ
ಜಾತ್ರೋತ್ಸವ ಚಾಲನಾ ಕಾರ್ಯಕ್ರಮ ಮುಗಿದ ನಂತರ ಮೌನಮ್ಮ ತಂಡದವರು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸುವ ಮೂಲಕ ಗಮನ ಸೆಳೆದರು. ಸ್ಥಳೀಯ ಶಾಲಾ-ಕಾಲೇಜು ತಂಡದವರಿಂದ ದೇವಿ ಕುಣಿತ ಹಾಗೂ ಧಾತ್ರಿ ರಂಗಸAಸ್ಥೆ ಸಿರಿಗೇರಿ ತಂಡದಿಂದ ಶ್ರೀಕೃಷ್ಣ ಸಂಧಾನ ನಾಟಕ ಭಕ್ತರನ್ನು ನಗೆಗಡಲಲ್ಲಿ ತೇಲಿಸಿತು.

Namma Sindhanuru Click For Breaking & Local News

ಅಪಾರ ಸಂಖ್ಯೆಯ ಭಕ್ತರು
ಈ ಬಾರಿ ಅದ್ಧೂರಿಯಾಗಿ ಜಾತ್ರಾ ಮಹೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಭಕ್ತ ಸಮೂಹ ಹೆಚ್ಚುತ್ತಿದೆ. ಶುಕ್ರವಾರ ಥಂಡಿ ಚಳಿಯ ನಡುವೆಯೂ ಅಪಾರ ಸಂಖ್ಯೆಯ ಭಕ್ತರು ನೆರೆದಿದ್ದು ಕಂಡುಬಂತು.

Namma Sindhanuru Click For Breaking & Local News
Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *