ನಮ್ಮ ಸಿಂಧನೂರು, ಜನವರಿ 31
ನಗರದ ಕುಷ್ಟಗಿ ಮಾರ್ಗದ ರಸ್ತೆಯಲ್ಲಿರುವ ಸರ್ಕಾರಿ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯನ್ನು ದುಷ್ಕರ್ಮಿ ಮುಬಿನ್ ಕೊಲೆ ಮಾಡಿ ತಪ್ಪೊಪ್ಪಿಕೊಂಡು ಲಿಂಗಸುಗೂರು ಪೊಲೀಸರಿಗೆ ಶರಣಾಗಿದ್ದು, ಒಟ್ಟು 9 ಜನರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗೀಡಾದ ವಿದ್ಯಾರ್ಥಿನಿ ಶಿಫಾಳ ಕೊಲೆ ಆರೋಪಿ ಶೇಖ್ ಮುಬಿನ್ ಸೇರಿದಂತೆ ಶೇಖ್ ಜಮೀರ್, ಶೇಖ್ ಮುನೀರ್, ಶೇಖ್ ಹಕೀಂ, ಶೇಖ್ ಅಕ್ರಂಪಾಶಾ, ಶೇಖ್ ಅಹ್ಮದ್ರಾಜ್, ಶೇಖ್ ಅಬ್ದುಲ್ಲಾ, ಶೇಖ್ ಆರೀಫ್, ಶೇಖ್ ಅರಬ್ಜಾ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.