ಸಿಂಧನೂರು: ಆ.24ರಿಂದ ಟೌನ್‌ಹಾಲ್‌ನಲ್ಲಿ ಸಮುದಾಯ ಸಂಘಟನೆಯಿಂದ ರಾಜ್ಯಮಟ್ಟದ ನಾಟಕೋತ್ಸವ

Spread the love

ನಮ್ಮ ಸಿಂಧನೂರು, ಆಗಸ್ಟ್ 23
ನಗರದ ಟೌನ್‌ಹಾಲ್‌ನಲ್ಲಿ ‘ಸಮುದಾಯ ಸಿಂಧನೂರು’ ವತಿಯಿಂದ ಆಗಸ್ಟ್ 24ರಿಂದ 26ರವರೆಗೆ ಮೂರು ದಿನಗಳ ಕಾಲ ರಾಜ್ಯಮಟ್ಟದ ನಾಟಕೋತ್ಸವ ಹಮ್ಮಿಕೊಳ್ಳಲಾಗಿದ್ದು, ಭರದ ಸಿದ್ಧತೆ ನಡೆದಿದೆ. ನಾಟಕೋತ್ಸವದದಲ್ಲಿ ಹಿರಿಯ ರಂಗಭೂಮಿ ಕಲಾವಿದರು, ರಂಗತಜ್ಞರು ಹಾಗೂ ರಂಗಾಸಕ್ತರ ಸಮಾಗಮವೇ ನಡೆಯಲಿದೆ. ನಾಟಕೋತ್ಸವದಲ್ಲಿ ಮೂರು ನಾಟಕಗಳನ್ನು ವಿವಿಧ ರಂಗ ತಂಡಗಳು ಅಭಿನಯಿಸಲಿವೆ.
ಮೂರು ನಾಟಕಗಳ ಪ್ರದರ್ಶನ
ಆಗಸ್ಟ್ 24 ರಂದು ಉದ್ಘಾಟನಾ ಸಮಾರಂ ನೆರವೇರಲಿದ್ದು, ಸಮುದಾಯ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮನೋಜ್ ವಾಮಂಜೂರ್ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಬಸವ ಕೇಂದ್ರದ ಸಹಕಾರದೊಂದಿಗೆ ಸಂಜೆ 6.30 ಗಂಟೆಗೆ ರಾಯಚೂರು ಸಮುದಾಯ ತಂಡದಿಂದ ಡಾ.ವಿಕ್ರಮ್ ವಿಸಾಜಿಯವರು ರಚಿಸಿದ, ಪ್ರವೀಣ್ ರೆಡ್ಡಿ ಗುಂಜಳ್ಳಿ ಅವರು ನಿರ್ದೇಶಿಸಿದ ‘ರಕ್ತ ವಿಲಾಪ’ ನಾಟಕ ಪ್ರದರ್ಶನಗೊಳ್ಳಲಿದೆ. ಆಗಸ್ಟ್ 25ರಂದು ಸಂಜೆ 5 ಗಂಟೆಗೆ ಸಮುದಾಯ ಹಿಂದಿನ ಹೆಜ್ಜೆಗಳ ಹೊರಳು ನೋಟ ಕಾರ್ಯಕ್ರಮ ನಡೆಯಲಿದ್ದು, ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ ಉದ್ಘಾಟಿಸುವರು. ಸಂಜೆ 6.30 ಗಂಟೆಗೆ ಸಮುದಾಯ ಸಿಂಧನೂರು ತಂಡದಿಂದ ಹನುಮಂತ ಹಾಲಿಗೇರಿ ರಚಿಸಿದ, ಗಿರೀಶ್ ಈಚನಾಳ ನಿರ್ದೇಶನದ ‘ಊರು ಸುಟ್ಟರೂ ಹನುಮಪ್ಪ ಹೊರಗ’ ನಾಟಕ ಪ್ರದರ್ಶನಗೊಳ್ಳಲಿದೆ.
ಆಗಸ್ಟ್ 26ರಂದು ಸಂಜೆ 6.30ಕ್ಕೆ ನಾಟಕೋತ್ಸವ ಸಮಾರೋಪ ಜರುಗಲಿದ್ದು, ಕೃಷ್ಣಮೂರ್ತಿ ಬಿಳಿಗೆರೆಯವರು ಸಮಾರೋಪದ ಮಾತುಗಳನ್ನಾಡಲಿದ್ದಾರೆ. ತದನಂತರ ಸಮುದಾಯ ಧಾರವಾಡದ ತಂಡದವರಿಂದ ಗಿರೀಶ್ ಕಾರ್ನಾಡ್ ರಚಿತ, ಮಹಾದೇವ ಹಡಪದ ಅವರು ನಿರ್ದೇಶನದ ತಲೆದಂಡ ನಾಟಕ ಪ್ರದರ್ಶನ ನಡೆಯಲಿದೆ. ಈ ನಾಟಕೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಸಮುದಾಯ ಸಂಘಟನೆ ತಾಲೂಕು ಅಧ್ಯಕ್ಷ ಶರಬಣ್ಣ ನಾಗಲಾಪುರ ಅವರು ಮನವಿ ಮಾಡಿದ್ದಾರೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *