ಸಿಂಧನೂರು: ಬಳಗಾನೂರು ಠಾಣೆ ಪಿಎಸ್‌ಐ ಎರಿಯಪ್ಪ ಸೇರಿ ಸಿಬ್ಬಂದಿ ಕಾರ್ಯಕ್ಕೆ ಎಸ್ಪಿ ಪ್ರಶಂಸೆ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 26

ಕಳ್ಳತನವಾಗಿದ್ದ 21 ಮೋಟರ್ ಸೈಕಲ್‌ಗಳೊಂದಿಗೆ ಐವರು ಆರೋಪಿತರನ್ನು ಪತ್ತೆಹಚ್ಚಿರುವ ಬಳಗಾನೂರು ಪೊಲೀಸ್ ಠಾಣೆಯ ಪಿಎಸ್‌ಐ ಎರಿಯಪ್ಪ ಸೇರಿದಂತೆ ಇತರೆ ಸಿಬ್ಬಂದಿಯವರ ಕಾರ್ಯಕ್ಕೆ ಜಿಲ್ಲಾ ಎಸ್ಪಿ ಪುಟ್ಟಮಾದಯ್ಯ ಎಂ ಅವರು ಪ್ರಶಂಸನೀಯ ಪತ್ರ ನೀಡಿದ್ದಾರೆ. “10,25,000/- ಬೆಲೆ ಬಾಳುವ ವಿವಿಧ ಕಂಪನಿಯ 21 ಮೋಟರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳುವ ಮೂಲಕ ಉತ್ತಮ ಕರ್ತವ್ಯ ನಿರ್ವಹಿಸಿರುತ್ತೀರಿ. ಮುಂದಿನ ದಿನಗಳಲ್ಲಿ ಕೂಡ ಇದೇ ರೀತಿಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಪೊಲೀಸ್ ಇಲಾಖೆ ಗೌರವ ಹೆಚ್ಚಿಸುವಲ್ಲಿ ಶ್ರಮಿಸುವಿರೆಂದು ಆಶಿಸುತ್ತಾ ಈ ಪ್ರಶಂಸನೀಯ ಪತ್ರ ನೀಡಲಾಗಿದೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *