ಸಿಂಧನೂರು: ಧರ್ಮಸ್ಥಳದಲ್ಲಿ ನೂರಾರು ಶಂಕಾಸ್ಪದ ಸಾವಿನ ಪ್ರಕರಣ ಹೈಕೋರ್ಟ್ ನ್ಯಾಯಾಧೀಶರ ಉಸ್ತುವಾರಿಯಲ್ಲಿ ಎಸ್‌ಐಟಿ ತನಿಖೆಗೆ ಒತ್ತಾಯ

Spread the love

ಲೋಕಲ್‌ ನ್ಯೂಸ್‌: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 24

ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರು, ಅಪ್ರಾಪ್ತರ ಸಾವಿನ ಪ್ರಕರಣ ಇಡೀ ದೇಶವಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದ್ದು, ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಹೈಕೋರ್ಟ್ ನ್ಯಾಯಾಧೀಶರ ಉಸ್ತುವಾರಿಯಲ್ಲಿ ಎಸ್‌ಐಟಿ ತಂಡ ತನಿಖೆ ನಡೆಸಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಸಂಚಾಲಕ ಚಂದ್ರಶೇಖರ ಗೊರಬಾಳ, “ಧರ್ಮಸ್ಥಳದ ಪ್ರಕರಣ ಆಘಾತಕಾರಿಯಾಗಿದ್ದು, ದಿನದಿಂದ ದಿನಕ್ಕೆ ಹಲವು ವಿಷಯಗಳು ಹೊರಬರುತ್ತಿವೆ. ಈ ಕುರಿತು ಮಹಿಳಾ ಆಯೋಗ ದೂರು ಸಲ್ಲಿಸಿದೆ. ಸುಪ್ರಿಂಕೋರ್ಟ್ ನಿವೃತ್ತ ನ್ಯಾಯಾಧೀಶ ಗೋಪಾಲಗೌಡ ಅವರು ಧ್ವನಿ ಎತ್ತಿದ್ದಾರೆ. ಕೊಲೆಗೀಡಾದವರನ್ನು ತಾನೇ ಹೂತಿರುವುದಾಗಿ ಹೇಳಿ ವ್ಯಕ್ತಿಯೊಬ್ಬ ಕೋರ್ಟ್ನಲ್ಲಿ ಹೇಳಿಕೆ ನೀಡಿದ್ದು ತನಿಖೆ ನಡೆಯುತ್ತಿದೆ. ಆದರೆ ಧರ್ಮದ ಹೆಸರಿನಲ್ಲಿ ದಾರಿ ತಪ್ಪಿಸುವ ಕೆಲಸವಾಗುತ್ತಿದೆ” ಎಂದು ಆಪಾದಿಸಿದರು.
“ಯಾವುದೇ ಪ್ರಭಾವ, ಒತ್ತಡಗಳಿಗೆ ಒಳಗಾಗದೇ ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿ”
“ರಾಜ್ಯ ಸರ್ಕಾರ ಎಸ್‌ಐಟಿ ತಂಡವನ್ನು ರಚಿಸಿದ್ದು, ಈ ತಂಡ ಹೈಕೋರ್ಟ್ ನ್ಯಾಯಾಧೀಶರ ಉಸ್ತುವಾರಿಯಲ್ಲಿ ಕೆಲಸ ಮಾಡಬೇಕು. ಯಾವುದೇ ಒತ್ತಡಗಳಿಗೆ, ಪ್ರಭಾವಗಳಿಗೆ ಒಳಗಾಗದೇ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಶವಗಳನ್ನು ಹೂಳಿಟ್ಟಿರುವುದಾಗಿ ಕೋರ್ಟ್ನಲ್ಲಿ ಹೇಳಿಕೆ ನೀಡಿರುವ ಸಾಕ್ಷಿ ವ್ಯಕ್ತಿಗೆ ಭದ್ರತೆ ಒದಗಿಸಬೇಕು, ಅಷ್ಟೇ ಅಲ್ಲದೇ ಆತನ ಕುಟುಂಬ ಮತ್ತು ವಕೀಲರಿಗೂ ಭದ್ರತೆ ಒದಗಿಸಬೇಕು” ಎಂದು ಆಗ್ರಹಿಸಿದರು.
“ಸಂಘ ಪರಿವಾರದವರು ಯಾಕೆ ಮಾತನಾಡುತ್ತಿಲ್ಲ ?”
ಧರ್ಮಸ್ಥಳ ಆಸುಪಾಸು ನೂರಾರು ಹಿಂದೂ ಮಹಿಳೆಯರು, ಅಪ್ರಾಪ್ತೆಯರು ಅನುಮಾನಾಸ್ಪದವಾಗಿ ಕೊಲೆಗೀಡಾಗಿ, ಹೂಳಲ್ಪಟ್ಟರೂ ಇದುವರೆಗೂ ಸಂಘಪರಿವಾರದ ಯಾರೊಬ್ಬರೂ ಮಾತನಾಡುತ್ತಿಲ್ಲ, ಹೋರಾಟ ಮಾಡುತ್ತಿಲ್ಲ ಯಾಕೆ ? ಹಾಗಾದರೆ ಈ ಮಹಿಳೆಯರಿಗೆ ನ್ಯಾಯ ಸಿಗುವುದು ಇವರಿಗೆ ಬೇಕಿಲ್ಲವೇ ?” ಎಂದು ಗೊರಬಾಳ ಪ್ರಶ್ನಿಸಿದರು.

Namma Sindhanuru Click For Breaking & Local News

“ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗಡೆ ರಾಜೀನಾಮೆ ನೀಡಲಿ?”
ಧರ್ಮಸ್ಥಳ ಆಸುಪಾಸು ನೂರಾರು ಹಿಂದೂ ಮಹಿಳೆಯರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಇದರ ನೈತಿಕ ಹೊಣೆಹೊತ್ತು ರಾಜ್ಯಸಭೆ ಸ್ಥಾನಕ್ಕೆ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ಸ್ಥಾನಕ್ಕೆ ವೀರೇಂದ್ರ ಹೆಗಡೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಧರ್ಮಸ್ಥಳದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ವಾ ? : ಶಕುಂತಲಾ ಪಾಟೀಲ್
ಧರ್ಮಸ್ಥಳದಲ್ಲಿ ಅನುಮಾನಾಸ್ಪದವಾಗಿ ನಡೆದಿರುವ ನೂರಾರು ಮಹಿಳೆಯರ ಕೊಲೆ, ಅತ್ಯಾಚಾರಗಳಿಗೆ ಸಂಬAಧಿಸಿದAತೆ ದಿನವೂ ಒಂದಿಲ್ಲೊAದು ಆಘಾತಕಾರಿ ವಿಷಯಗಳು ಬಯಲಿಗೆ ಬರುತ್ತಿದ್ದು, ಇಲ್ಲಿನ ಮಹಿಳೆಯರಿಗೆ ಕನಿಷ್ಠ ರಕ್ಷಣೆ ಇಲ್ಲವೇ ? ಎಂದು ಭಯವಾಗುತ್ತಿದೆ. ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ಪೈಶಾಚಿಕವಾಗಿ ಕೊಲೆ ಮಾಡುವುದು ಯಾವ ನ್ಯಾಯ, ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಬೇಕು” ಎಂದು ಸರ್ಕಾರಕ್ಕೆ ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಚಾಲಕರಾದ ಬಾಬರ್‌ಬೇಗ್, ಬಸವರಾಜ ಬಾದರ್ಲಿ, ಕೃಷ್ಣಮೂರ್ತಿ, ಚಿಟ್ಟಿಬಾಬು, ಸಿದ್ಧೇಶ್ವರಿ, ಡಿ.ಎಚ್.ಕಂಬಳಿ, ಶಂಕರ ಗುರಿಕಾರ, ಹುಸೇನ್‌ಸಾಬ್, ಬಸವರಾಜ ಹಸಮಕಲ್ ಸೇರಿದಂತೆ ಇನ್ನಿತರರು ಇದ್ದರು.


Spread the love

Leave a Reply

Your email address will not be published. Required fields are marked *