ಸಿಂಧನೂರು: ಒಂದೇ ಬೆಳೆ, ರೈತರು, ಕೃಷಿ ಕೂಲಿಕಾರರಿಗೆ ಕೈಗೆ ಕೆಲಸವಿಲ್ಲ, ಬಿಕೊ ಎನ್ನುತ್ತಿರುವ ಎಪಿಎಂಸಿ

Spread the love

(ವರದಿ : ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಏಪ್ರಿಲ್ 6

ಮಳೆ ಅಭಾವದಿಂದ ಉಂಟಾದ ಬರಗಾಲದಿಂದಾಗಿ ತುಂಗಭದ್ರಾ ಅಚ್ಚಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಈ ಬಾರಿ ಒಂದೇ ಬೆಳೆಗೆ ಸೀಮಿತಗೊಂಡಿದ್ದರಿಂದ ರೈತರು, ಕೃಷಿ ಕೂಲಿಕಾರರ ಕೈಗೆ ಕೆಲಸವಿಲ್ಲದಂತಾಗಿದ್ದು, ಇನ್ನು ಸಿಂಧನೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟು ಕ್ಷೀಣಗೊಂಡು, ಬಿಕೋ ವಾತಾವರಣ ಉಂಟಾಗಿದೆ. ಕಳೆದ ವರ್ಷ ಸಾಕಷ್ಟು ಮಳೆ ಸುರಿದು ಎರಡು ಹಿಂಗಾರು, ಮುಂಗಾರು ಎರಡು ಹಂಗಾಮಿನಲ್ಲಿ ರೈತರು ಭತ್ತದ ಫಸಲು ತೆಗೆದಿದ್ದರು. ಅಲ್ಲದೇ ಚೀಲವೊಂದಕ್ಕೆ 2000 ರೂಪಾಯಿಗೂ ಹೆಚ್ಚು ದರದಲ್ಲಿ ಭತ್ತ ಮಾರಾಟ ಮಾಡಿದ್ದರು. ಆದರೆ ಈ ಬಾರಿ ಭತ್ತಕ್ಕೆ ಉತ್ತಮ ದರವೇನೋ ಇದೆ ಆದರೆ, ತುಂಗಭದ್ರಾ ಎಡದಂಡೆ ಡ್ಯಾಂನಲ್ಲಿ ನೀರಿಲ್ಲದ ಕಾರಣ ಒಂದೇ ಬೆಳೆಗೆ ಕೈತೊಳೆದುಕೊಳ್ಳುವಂತಾಗಿದೆ.

Namma Sindhanuru Click For Breaking & Local News

ಕೆಲಸ ಅರಸಿ ಗುಳೆ:
ಎರಡು ಬೆಳೆ ಇದ್ದರೆ ಕೈತುಂಬ ಕೆಲಸ ಇರುತ್ತಿತ್ತು. ಆದರೆ ಈ ವರ್ಷ ಒಂದೇ ಬೆಳೆಯಾಗಿದ್ದರಿಂದ ಕೆಲಸವಿಲ್ಲದಂತಾಗಿದೆ. ಹೊಟ್ಟೆಪಾಡಿಗಾಗಿ ಬೇರೆ ಊರಿಗೆ ಕೆಲಸ ಅರಸಿ ಹೋಗುವುದು ಅನಿವಾರ್ಯವಾಗಿದೆ. ಇಲ್ಲಿಯೇ ಇದ್ದರೆ ಹೊಟ್ಟೆ ಬದುಕುವುದು ಕಷ್ಟ ಎಂದು ತಾಲೂಕಿನ ವಿವಿಧ ಕ್ಯಾಂಪ್‌ಗಳಲ್ಲಿ ನೆಲೆ ಕಂಡುಕೊಂಡಿರುವ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳ ಸದಸ್ಯರ ಮಾತಾಗಿದೆ. ಒಂದೇ ಬೆಳೆಯ ಕಾರಣದಿಂದಾಗಿ ಬಹುತೇಕ ಕ್ಯಾಂಪ್ ಸೇರಿದಂತೆ ಹಲವು ಗ್ರಾಮಗಳ ಬಹಳಷ್ಟು ಜನರು ಬೆಂಗಳೂರು, ಗೋವಾ, ಮಂಗಳೂರು, ಮುಂಬೈ ಸೇರಿದಂತೆ ಹಲವು ಮಹಾನಗರಗಳಿಗೆ ಕೆಲಸ ಹುಡುಕಿಕೊಂಡು ವಲಸೆ ಹೋಗಿದ್ದಾರೆ ಎಂದು ಕಾರ್ಮಿಕ ಸಂಘಟನೆಯ ಮುಖಂಡರೊಬ್ಬರು ಹೇಳುತ್ತಾರೆ.

Namma Sindhanuru Click For Breaking & Local News

ಖರ್ಚು-ವೆಚ್ಚದ ಲೆಕ್ಕಾಚಾರ
ಬರಗಾಲ ಮತ್ತು ಒಂದೇ ಬೆಳೆಯಾದ ಕಾರಣ ಈ ಬಾರಿ ರೈತ ಸಮೂಹ ಸೇರಿದಂತೆ ಕೃಷಿ ಅವಲಂಬಿತ ಮಧ್ಯಮ ವರ್ಗದ ಕುಟುಂಬಗಳು ಖರ್ಚು-ವೆಚ್ಚದ ಮೇಲೆ ಲೆಕ್ಕಾಚಾರ ಹಾಕುವಂತಾಗಿದೆ. ಅಲ್ಲದೇ ಎಪಿಎಂಸಿಯಲ್ಲಿಯೂ ವ್ಯವಹಾರ ಕುಸಿದ ಕಾರಣ ಇಲ್ಲಿ ಕೆಲಸ ಕಂಡುಕೊAಡಿದ್ದ ಹಲವು ಜನರು ಬೇಸಿಗೆಯಲ್ಲಿ ನಿರುದ್ಯೋಗ ಸಮಸ್ಯೆ ಎದುರಿಸುವಂತಾಗಿದೆ. ಕೃಷಿ ಕ್ಷೇತ್ರದಲ್ಲಿ ಉಲ್ಲಾಸದ ವಾತಾವರಣವಿದ್ದರೆ ಮಾರುಕಟ್ಟೆ ಚೇತೋಹಾರಿಯಾಗಿರುತ್ತದೆ. ಆದರೆ, ಕೃಷಿ ಕ್ಷೇತ್ರದಲ್ಲಿನ ಸಣ್ಣಪುಟ್ಟ ಏರುಪೇರುಗಳು ಸಿಂಧನೂರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ಎಪಿಎಂಸಿಯ ಭತ್ತದ ವ್ಯಾಪಾರಿಗಳೊಬ್ಬರು ಹೇಳುತ್ತಾರೆ.


Spread the love

Leave a Reply

Your email address will not be published. Required fields are marked *