ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 15
ತಾಲೂಕಿನ ಕಲ್ಲೂರು ಪೆಟ್ರೋಲ್ ಬಂಕ್ ಬಳಿ 150ಎ ಎನ್ನೆಚ್ ಜೇವರ್ಗಿ-ಚಾಮರಾಜನಗರ ಹೆದ್ದಾರಿಗೆ ಸೇತುವೆ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಪ್ರಸ್ತುತ ನಿರ್ಮಿಸಿರುವ ತಾತ್ಕಾಲಿಕ ಸೇತುವೆ ಎರಡನೇ ಬಾರಿ ಕೊಚ್ಚಿಹೋಗಿದ್ದು, ಭಾನುವಾರ ಮತ್ತು ಸೋಮವಾರ ಎರಡು ದಿನಗಳ ಕಾಲ ಈ ಮಾರ್ಗದಲ್ಲಿ ಸಂಚಾರ ಅಯೋಮಯವಾಗಿದೆ.
ಈ ತಾತ್ಕಾಲಿಕ ಸೇತುವೆ ದಿನಾಂಕ: 14-09-2025ರಂದು ಎರಡನೇ ಬಾರಿಗೆ ಕುಸಿದಿದ್ದು, ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ನಿಷ್ಕಾಳಜಿಗೆ ಜ್ವಲಂತ ಸಾಕ್ಷಿಯಾಗಿರುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸೇತುವೆ ಮೇಲ್ಭಾಗದಲ್ಲಿ ಚೆಕ್ ಡ್ಯಾಂ ಇದ್ದು ಅತ್ಯಂತ ವೈಜ್ಞಾನಿಕವಾಗಿ, ಜಾಗರೂಕತನದಿಂದ ಅದರಲ್ಲೂ ದಿನವೂ ಸಾವಿರಾರು ವಾಹನಗಳು ಸಂಚರಿಸುವ ಈ ಮಾರ್ಗದಲ್ಲಿ ಗುಣಮಟ್ಟದ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ.
ಆಸ್ಪತ್ರೆಗೆ ಹೋಗಲು ದಾರಿಯಿಲ್ಲದಂತಾಗಿದೆ ಸಾರ್ವಜನಿಕರ ಅಳಲು
ವಾತಾವರಣದ ವೈಪರೀತ್ಯದಿಂದ ಮಕ್ಕಳು ಸೇರಿದಂತೆ ಕುಟುಂಬದ ಹಲವರಲ್ಲಿ ಅನಾರೋಗ್ಯ ಕಾಡುತ್ತಿದೆ. ಚಿಕಿತ್ಸೆ ಪಡೆಯಲು ಹೋಗಬೇಕಂದರೂ ಹೆದ್ದಾರಿ ಸೇತುವೆ ಕೊಚ್ಚಿ ಹೋಗಿರುವುದರಿಂದ ಸುತ್ತಿಬಳಸಿ ಗ್ರಾಮೀಣ ಪ್ರದೇಶದ ದಾರಿಯಲ್ಲಿ ಸುತ್ತುವರಿಯಬೇಕಿದೆ. ಸಾರಿಗೆ ಬಸ್‌ಗಳ ಸಂಚಾರ ಸ್ಥಗಿತಗೊಂಡಿರುವುದರಿAದ ವಿಪರೀತ ತಾಪತ್ರಯ ಅನುಭವಿಸುವಂತಾಗಿದೆ. ಈ ಸೇತುವೆ ಎರಡನೇ ಬಾರಿ ಕುಸಿದಿರುವುದಕ್ಕೆ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಬೇಜವಾಬ್ದಾರಿಯೇ ಕಾರಣ ಎಂದು ನಾಗರಿಕರು ಆರೋಪಿಸಿದ್ದಾರೆ.

ವ್ಯಾಪಾರ-ವಹಿವಾಟು ನಷ್ಟ ?
ಎರಡು ದಿನ ಈ ಮಾರ್ಗದ ರಸ್ತೆ ಸಂಪೂರ್ಣ ಬಂದ್ ಆಗಿದ್ದರಿಂದ ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳು ಗೈರಾಗುವಂತಾಗಿದೆ. ಸರ್ಕಾರಿ ನೌಕರಿಗೆ ತೆರಳುವ ಸಿಬ್ಬಂದಿ, ಆಂಬ್ಯಲೆನ್ಸ್ ಓಡಾಟ ಸಂಪೂರ್ಣ ಆಯೋಮಯವಾಗಿದ್ದು, ಜನಸಾಮಾನ್ಯರು ಪರದಾಡುವಂತಾಗಿದೆ. ಇನ್ನೂ ಸರಕು ಸಾಗಾಟ ಮಾಡುವ ವಾಹನಗಳ ಸಂಚಾರ ಬಂದ್ ಆಗಿದ್ದರಿಂದ ತೀವ್ರ ಸಮಸ್ಯೆಯಾಗಿದೆ. ವ್ಯಾಪಾರ-ವಹಿವಾಟಿಗೆ ಸಮಸ್ಯೆಯಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ ಎಂದು ವ್ಯಾಪಾರಸ್ಥರು ಗೋಳಿಟ್ಟಿದ್ದಾರೆ.
ಅಧಿಕಾರಿಗಳ ಬೇಜವಾಬ್ದಾರಿ: ಆರೋಪ
ರೈತರು ಕೃಷಿ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ಅಡಚಣೆಯಾಗಿದ್ದು, ಇದು ಎನ್‌ಎಚ್‌ಎಐ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಮುಂದಾಲೋಚನೆ ಕೊರತೆಯಿಂದ ಎರಡನೇ ಬಾರಿ ಕೊಚ್ಚಿ ಹೋಗಿದೆ. ಈ ಕುರಿತು ಹಲವು ಮಾಧ್ಯಮಗಳು ವರದಿ ಮಾಡಿ ಎಚ್ಚರಿಸಿದರೂ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ ಹುನುಗುಂದ ವಿಭಾಗದ ಉಪ ವಿಭಾಗ ಅಧಿಕಾರಿಗಳು ಈ ಕುರಿತು ಎಚ್ಚರ ವಹಿಸಿರುವುದಿಲ್ಲ. ನೀರು ಹರಿಯಲು ಸಣ್ಣ ಪೈಪುಗಳನ್ನು ಅಳವಡಿಸಿದ್ದಲ್ಲದೇ ಸರಿಯಾಗಿ ಮರಂ ಹಾಕದೇ ಅತ್ಯಂತ ಕೆಳ ಮಟ್ಟದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಿರುವುದು ಸಮಸ್ಯೆ ಉಂಟಾಗಲು ಕಾರಣವಾಗಿರುತ್ತದೆ.
