ಸಿಂಧನೂರು: ಪ್ರತ್ಯೇಕ ಗಾಂಜಾ ಪ್ರಕರಣ: 5 ಜನ ಆರೋಪಿತರ ಬಂಧನ

Spread the love

ಲೋಕಲ್‌ ನ್ಯೂಸ್‌ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 2
ಪ್ರತ್ಯೇಕ ಗಾಂಜಾ ಪ್ರಕರಣಗಳಲ್ಲಿ ನಗರ ಪೊಲೀಸ್ ಠಾಣೆ ಸಿಬ್ಬಂದಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ದಾಳಿ ನಡೆಸಿ, 5 ಜನ ಆರೋಪಿಗಳನ್ನು ಬಂಧಿಸುವ ಮೂಲಕ ನ್ಯಾಯಾಂಗ ವಶಕ್ಕೆ ಒಪ್ಪಿಸಿದ ಘಟನೆ ನಡೆದಿದೆ. ದಿನಾಂಕ:29-11-2025 ರಂದು ನಗರದ ಯಲ್ಲಮ್ಮ ಗುಡಿ ಹತ್ತಿರ ಅಕ್ರಮವಾಗಿ ಮಾದಕ ವಸ್ತುಗಳನ್ನು ಸೇವನೆ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಡಿಎಸ್‌ಪಿ ಚಂದ್ರಶೇಖರ.ಜಿ. ಹಾಗೂ ಸಿಬ್ಬಂದಿ ದಾಳಿ ಮಾಡಿ ಗಾಂಜಾ ಸೇವನೆ ಮಾಡಿದ್ದ ಅಹಮದ್ ರಜಾ ತಂದೆ ಮೆಹೆಬೂಬ ಪಾಶ, ಮೌನೇಶ ತಂದೆ ರಾಚಪ್ಪ ಹಾಗೂ ಅಲ್ತಾಪ್ ತಂದೆ ರಾಜ ಮಹಮದ್ ಇವರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ 3 ಪ್ರತ್ಯೇಕ ದೂರುಗಳನ್ನು ದಾಖಲಿಸಿರುತ್ತಾರ
ದಿ.30-11-2025 ರಂದು ಮಧ್ಯಾಹ್ನ ನಗರದ ಕುಷ್ಟಗಿ ರಸ್ತೆಯ ವೇರ್ ಹೌಸ್ ಕ್ವಾರ್ಟರ್ಸ್ ಮಹಡಿಯ ಮೇಲುಗಡೆ ಹಸಿ ಗಾಂಜಾ ಗಿಡ ಬೆಳೆಸಿದ ಮಾಹಿತಿ ಮೇರೆಗೆ ಡಿಎಸ್‌ಪಿ ಚಂದ್ರಶೇಖರ.ಜಿ. ಸಿಂಧನೂರು ಅವರ ನೇತೃತ್ವದಲ್ಲಿ ನಗರ ಠಾಣೆ ಪಿಐ ವೀರಾರೆಡ್ಡಿ ಸಿಂಧನೂರು ಹಾಗೂ ಸಿಬ್ಬಂದಿಗಳಾದ ಸೋಮನಗೌಡ, ಹಫೀಜುಲ್ಲಾ, ಹೇಮರೆಡ್ಡಿ, ಮಂಜುನಾಥ ಹಾಗೂ ವೀರಭದ್ರಪ್ಪ ಇವರು ದಾಳಿ ಮಾಡಿ ಆರೋಪಿತ ಖಾದರಭಾಷ @ ಮನ್ಸೂರು ತಂದೆ ಅನ್ವರಪಾಷ ಈತನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ.
ದಿ.30-11-2025 ರಂದು ರಾತ್ರಿ ಸಿಂಧನೂರು ನಗರದ ಹೊರವಲಯದ ಕರಿಯಪ್ಪ ಲೇಔಟ್‌ನ ಮಲ್ಲಯ್ಯ ದೇವಸ್ಥಾನದ ಹತ್ತಿರ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಡಿಎಸ್‌ಪಿ ಚಂದ್ರಶೇಖರ.ಜಿ. ನೇತೃತ್ವದಲ್ಲಿ ನಗರ ಠಾಣೆ ಪಿಐ ವೀರಾರೆಡ್ಡಿ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ, ಕೃಷ್ಣ ತಂದೆ ರಾಮಪ್ಪ, ಬಸವರಾಜ ತಂದೆ ಲಿಂಗಪ್ಪ ಹಂಚಿನಾಳ ಅವರಿಂದ ಮಾದಕ ದ್ರವ್ಯ ಭಂಗಾದ 30 ಪ್ಯಾಕೆಟ್‌ಗಳು, 140 ಗ್ರಾಂ ಅಂ.ಕಿ.ರೂ. 1450/-ಜಪ್ತಿ ಮಾಡಿಕೊಂಡು ಇವರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ.


Spread the love

Leave a Reply

Your email address will not be published. Required fields are marked *