ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 11
ನಗರದ ಶಹರ ಪೊಲೀಸ್ ಠಾಣೆ ಬಳಿ ಸಿಸಿ ರಸ್ತೆ ದುರಸ್ತಿಗಾಗಿ ಕಳೆದ ಮರ‍್ನಾಲ್ಕು ದಿನಗಳಿಂದ ರಾಯಚೂರು-ಗಂಗಾವತಿ ರಸ್ತೆ ಬದಿ ಬೇಲಿ ಹಾಕಲಾಗಿದ್ದು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗಿದೆ.
ಠಾಣೆ ಬಳಿಯ ಸಿಸಿ ರಸ್ತೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಆರ್‌ಜಿಎಂ ಶಾಲೆಯ ನೂರಾರು ವಿದ್ಯಾರ್ಥಿಗಳು ದಿನವೂ ಸಂಚರಿಸುತ್ತಾರೆ. ಆದರೆ ರಸ್ತೆ ದುರಸ್ತಿಗಾಗಿ ಬೇಲಿ ಹಾಕಿರುವುದರಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆತಂದಿAದ ಶಾಲೆಗೆ ತೆರಳುವಂತಾಗಿದೆ. ಸಿಮೆಂಟ್ ಕ್ಯೂರಿಂಗ್‌ಗಾಗಿ ಹಲವು ದಿನಗಳ ಹಿಂದೆ ಬೇಲಿ ಹಾಕಲಾಗಿದೆ. ಈಗಾಗಲೇ ಸಿಮೆಂಟ್ ಗಟ್ಟಿಯಾಗಿದ್ದು, ವಾಹನಗಳು ಹೊರತುಪಡಿಸಿ, ಸಾರ್ವಜನಿಕರು ಸಂಚರಿಸಬಹುದಾಗಿದ್ದರೂ ಇನ್ನೂ ಬೇಲಿ ತೆಗೆದಿಲ್ಲ ಎಂದು ವಿದ್ಯಾರ್ಥಿಗಳ ಪಾಲಕರು ದೂರಿದ್ದಾರೆ.
