Spread the love

ನಮ್ಮ ಸಿಂಧನೂರು, ಜುಲೈ 13
ನಗರದ ಯಲ್ಲಮ್ಮ ದೇವಸ್ಥಾನದ ಬಳಿಯಿರುವ ಸನ್‌ರೈಸ್ ಡಿ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳು ಜನವರಿ 2024ರಲ್ಲಿ ನಡೆದ ಕರ್ನಾಟಕ ರಾಜ್ಯ ಡಿ ಫಾರ್ಮಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದು, ಇಬ್ಬರು ವಿದ್ಯಾರ್ಥಿನಿಯರು ರಾಜ್ಯಮಟ್ಟದ ರ‍್ಯಾಂಕ್ ಪಡೆದಿದ್ದಾರೆ. ಆಯೇಷಾ ಬೇಗಂ ತಂದೆ ಖದೀರ್ ಪಾಷಾ ಮತ್ತು ನಿಖತ್ ತಮಕೀನ್ ತಂದೆ ನಬೀಸಾಬ್ ಅವರು 805 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಮಟ್ಟದಲ್ಲಿ 7ನೇ ರ‍್ಯಾಂಕ್ ಪಡೆದಿದ್ದಾರೆ. ಅಲ್ಲದೇ ಕಾಲೇಜು ಶೇ.100ರಷ್ಟು ಫಲಿತಾಂಶ ಪಡೆದಿದೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಇರ್ಫಾನ್.ಕೆ, ಪ್ರಾಚಾರ್ಯ ವಾಸೀಂಹುಸೇನ್, ಪ್ಯಾರಾಮೆಡಿಕಲ್ ಪ್ರಾಚಾರ್ಯ ಡಿ.ಚಕ್ರವರ್ತಿ, ನರ್ಸಿಂಗ್ ಪ್ರಾಚಾರ್ಯ ಲಾಜರ್ ಸಿರಿಲ್, ಸಾಗರ್, ರಾಜೇಶ್, ಅಶೋಕ್, ಯಾಸೀನ್ ಅವರು ಅಭಿನಂದಿಸಿದ್ದಾರೆ.


Spread the love

Leave a Reply

Your email address will not be published. Required fields are marked *