ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 10
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಂಗಾಯಣ ಕಲಬುರಗಿ ಹಾಗೂ ಆಕ್ಸ್ಫರ್ಡ್ ಸಮೂಹ ಸಂಸ್ಥೆಗಳ ವತಿಯಿಂದ ನಗರದ ಟೌನ್‌ಹಾಲ್‌ನಲ್ಲಿ ಜನವರಿ 10ರಿಂದ 12ರವರೆಗೆ ಹಮ್ಮಿಕೊಂಡಿರುವ ಕಾಲೇಜು ರಂಗೋತ್ಸವ 2024-25ಕ್ಕೆ ಶುಕ್ರವಾರ ಅದ್ಧೂರಿ ಚಾಲನೆ ದೊರೆಯಿತು.
ಕಾಲೇಜು ರಂಗೋತ್ಸವ 2024-25ಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರು, ಕಲ್ಯಾಣ ಕರ್ನಾಟಕ ಭಾಗ ಹಲವು ಕಲೆ, ಸಂಸ್ಕೃತಿಗಳ ತವರೂರು ಆಗಿದೆ. ಇಲ್ಲಿನ ಬಯಲಾಟ, ದೊಡ್ಡಾಟದಂತಹ ಕಲೆಗಳು ಆಧುನಿಕತೆಯ ಭರಾಟೆಯಲ್ಲಿ ನಶಿಸಿ ಹೋಗುತ್ತಿವೆ. ಕರಾವಳಿ ಭಾಗದ ಯಕ್ಷಗಾನಕ್ಕೆ ದೊರೆತಂತಹ ಮನ್ನಣೆ ಈ ಭಾಗದ ಕಲೆಗಳಿಗೆ ದೊರೆತಿಲ್ಲ. ವಿದ್ಯಾರ್ಥಿಗಳಲ್ಲಿ ರಂಗಾಸಕ್ತ ಮತ್ತು ಈ ಭಾಗದ ನೆಲಮೂಲ ಸಂಸ್ಕೃತಿಗೊಳಿಸುವ ನಿಟ್ಟಿನಲ್ಲಿ ರಂಗಾಯಣದವರು ಹಮ್ಮಿಕೊಂಡಿರುವ ಕಾಲೇಜು ರಂಗೋತ್ಸವ ಸ್ವಾಗತಾರ್ಹವಾಗಿದೆ. ಇನ್ನಾದರೂ ಕಲ್ಯಾಣ ಕರ್ನಾಟಕದ ಕಲೆಗಳಿಗೆ ಪುನಶ್ಚೇತನ ದೊರೆಯುವಂತಾಗಲಿ ಎಂದು ಅಭಿಪ್ರಾಯಪಟ್ಟರು.
ಬಂಗಾರಿಕ್ಯಾಂಪ್‌ನ ಸಿದ್ಧರಾಮೇಶ್ವರ ಶರಣರು, ಕರ್ನಾಟಕ ರಂಗಾಯಣ ಕಲಬುರಗಿ ನಿರ್ದೇಶಕ ಡಾ.ಸುಜಾತ ಜಂಗಮಶೆಟ್ಟಿ, ಆಕ್ಸ್‌ಫರ್ಡ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಎನ್.ಸತ್ಯನಾರಾಯಣ ಶ್ರೇಷ್ಠಿ, ಜಿ.ಪಂ.ಮಾಜಿ ಸದಸ್ಯ ಬಸವರಾಜ ಹಿರೇಗೌಡ, ಶ್ರೀಕೃಷ್ಣದೇವರಾಯ ವಿವಿಯ ನಾಟಕ ವಿಭಾಗದ ಮುಖ್ಯಸ್ಥೆ ಶಾಂತನಾಯಕ, ರೈತ ಮುಖಂಡ ಶಿವನಗೌಡ ಗೊರೇಬಾಳ, ನಗರಸಭೆ ಮಾಜಿ ಅಧ್ಯಕ್ಷ ಜಾಫರ್ ಜಾಗೀರದಾರ, ಲಿಂಗಪ್ಪ ದಡೇಸುಗೂರು, ರುದ್ರಗೌಡ ಸಾಸಲಮರಿ, ವೀರೇಶ ಸಿಳ್ಳಿ, ಕ್ರಾಂತಿ ಬಾದರ್ಲಿ, ನಗರಸಭೆ ಸದಸ್ಯ ಛತ್ರಪ್ಪ, ಕರ್ನಾಟಕ ರಂಗಾಯಣ ಕಲಬುರಗಿಯ ಆಡಳಿತಾಧಿಕಾರಿ ಜಗದೀಶ್ವರಿ ನಾಶಿ, ಎಸ್.ಬಿ.ಹರಿಕೃಷ್ಣ, ಸರದಾರ.ಬಿ, ಕಲಾವಿದ ಅಶೋಕ ಉಮಲೂಟಿ, ಆಕ್ಸ್ಫರ್ಡ್ ಕಾಲೇಜ ಆಡಳಿತಾಧಿಕಾರಿ ಸಂಜೀವ್‌ಕುಮಾರ್, ಪತ್ರಕರ್ತರಾದ ಅಶೋಕ ಬೆನ್ನೂರು, ಚಂದ್ರಶೇಖರ ಬೆನ್ನೂರು, ಇನ್ನಿತರರಿದ್ದರು. ಉಪನ್ಯಾಸಕ ಕೆ.ದೊಡ್ಡಮನಿ ಸ್ವಾಗತಿಸಿದರು.