ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 10
ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಕಾಯ್ದೆ 2025 ಜಾರಿಗೆ ತಂದಿರುವುದನ್ನು ವಿರೋಧಿಸಿ, ಈ ಕಾಯ್ದೆ ರದ್ದುಪಡಿಸಿಲು ಆಗ್ರಹಿಸಿ, ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗ ಹಾಗೂ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಶನ್ ವತಿಯಿಂದ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ರಾಷ್ಟ್ರಪತಿಗಳಿಗೆ ಗ್ರೇಡ್ 2 ತಹಸೀಲ್ದಾರ್ ಚಂದ್ರಶೇಖರ್ ಇವರ ಮುಖಾಂತರ, ಸುಮಯ್ಯ ಬೇಗಂ ಅಧ್ಯಕ್ಷರು ಮಹಿಳಾ ವಿಭಾಗ ಜಮಾಅತೆ ಇಸ್ಲಾಮಿ ಹಿಂದ್ ಸಿಂಧನೂರು ಹಾಗೂ ನೇಹಾ ಸಮ್ರೀನ್ ಅಧ್ಯಕ್ಷರು ಜಿಐಓ ಸಿಂಧನೂರು ಇವರು ರವಾನಿಸಿದರು.
ಪ್ರತಿಭಟನಾ ಮೆರವಣಿಗೆಯು ನಗರದ ಪಟೇಲ್‌ವಾಡಿಯ ಮಸ್ಜಿದ್ ಏ ಹುದಾದಿಂದ ಆರಂಭವಾಗಿ ಮುಖ್ಯ ರಸ್ತೆಯ ಕಿತ್ತೂರುರಾಣಿ ಚನ್ನಮ್ಮ ಸರ್ಕಲ್, ಕನಕದಾಸ ಸರ್ಕಲ್ ಮಾರ್ಗವಾಗಿ ತಹಸೀಲ್ದಾರ್ ಕಚೇರಿಗೆ ತಲುಪಿತು. ಪ್ರತಿಭಟನಾ ಮೆರವಣಿಗೆಯಲ್ಲಿ ಸಂಘಟನೆಯ ಮಹಿಳಾ ಕಾರ್ಯಕರ್ತೆಯರ ನೇತೃತ್ವದಲ್ಲಿ ಸಮುದಾಯದ ಮಹಿಳೆಯರು ಸಾಗಿದರು.

“ವಕ್ಫ್ ಉಳಿಸಿ-ಸಂವಿಧಾನವನ್ನು ರಕ್ಷಿಸಿ” ಘೋಷಣೆ
“ವಕ್ಫ್ ತಿದ್ದುಪಡಿ ಕಾಯ್ದೆ 2025 ಭಾರತ ಸಂವಿಧಾನಕ್ಕೆ ವಿರುದ್ಧವಾಗಿದೆ, ವಕ್ಫ್ ತಿದ್ದುಪಡಿ ಕಾಯ್ದೆ 2025 ಸ್ವೀಕಾರಾರ್ಹವಲ್ಲ, ವಕ್ಫ್ ತಿದ್ದುಪಡಿ ಕಾಯ್ದೆ 2025 ಅನ್ನು ಮುಸ್ಲಿಮರನ್ನು ದುರ್ಬಲಗೊಳಿಸಲು ತರಲಾಗಿದೆ, ವಕ್ಫ್ ತಿದ್ದುಪಡಿ ಕಾಯ್ದೆ 2025 ಕಾಯ್ದೆ ಅಸಮರ್ಥನೀಯ, ವಕ್ಫ್ ತಿದ್ದುಪಡಿ ಕಾಯ್ದೆ 2025 ಅನ್ನು ಮುಸ್ಲಿಂ ಆಸ್ತಿಗಳನ್ನು ಲೂಟಿ ಮಾಡಲು ಜಾರಿಗೆ ತರಲಾಗಿದೆ, ವಕ್ಫ್ ಉಳಿಸಿ-ಸಂವಿಧಾನವನ್ನು ರಕ್ಷಿಸಿ” ಎಂದು ಮೆರವಣಿಗೆಯ ಉದ್ದಕ್ಕೂ ಪ್ರತಿಭಟನಾಕಾರರು ಘೋಷಣೆಗಳನ್ನು ಹಾಕಿದರು.
ಈ ಸಂದರ್ಭದಲ್ಲಿ ಉಮ್ಮೆಕುಲ್ಸುಂ, ಶಹನಾಜ್ ಬೇಗಂ, ಸೈಯದಾ ಬೇಗಂ, ಖಮರ್ ಸುಲ್ತಾನ, ಅತಿಯಾ ಫೌಝಿಯಾ, ರಿಜ್ವಾನ ಬೇಗಂ, ಲುಬ್ನಾ ಬೆಳಗಾಮಿ, ಅರ್ಶಿಯಾ ಮತೀನ, ತಹೆಸೀನ್ ಪರ್ವಿನ್ ಕಾರ್ಯದರ್ಶಿ ಜಿಐಒ, ಅಸ್ಮಾ ಖಾನಂ, ಶಾಜಿಯಾ, ಜಮಾಅತೆ ಇಸ್ಲಾಮಿ ಹಿಂದ್‌ನ ತಾಲೂಕು ಅಧ್ಯಕ್ಷ ಮುಹಮ್ಮದ್ ಹುಸೇನ್, ಶರ್ಫುದ್ದೀನ ಸಾಬ್, ದಿಲಾವರ್ ಅಂಬರ್ ಖಾನ್, ಮಹೆಬೂಬ ಖಾನ್, ವಸೀಮ್, ಇಮ್ತಿಯಾಜ್ ಎಸ್‌ಐಒ ಸೇರಿದಂತೆ ಇನ್ನಿತರರು ಇದ್ದರು.
