ನಮ್ಮ ಸಿಂಧನೂರು, ಎಪ್ರಿಲ್ 28
ಮಹಿಳೆಯರ ಮೃತದೇಹ ಪೋಸ್ಟ್ ಮಾರ್ಟ್ಂಗೆ ನಗರದ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರು 2000 ರೂಪಾಯಿ ಹಣ ಲಂಚ ಕೇಳಿ ಪೀಡಿಸಿದ್ದಾರೆಂದು ಆರೋಪಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮುಖಂಡ ಅಪ್ಪಣ್ಣ ಕಾಂಬ್ಳೆ ನೇತೃತ್ವದಲ್ಲಿ ಮೃತ ಮಹಿಳೆಯ ಮನೆಯವರು ಹಾಗೂ ಸಂಘಟನೆಯ ಕಾರ್ಯಕರ್ತರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.
ಸಿಂಧನೂರು ತಾಲೂಕಿನ ಕೆಂಗಲ್ ಗ್ರಾಮದ ಅಂಬಮ್ಮ ಹನುಮಂತರಾಯ (57) ಎಂಬುವವರು ದಡೇಸುಗೂರು ಗ್ರಾಮದಲ್ಲಿ ಮೃತಪಟ್ಟಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪಂಚನಾಮೆ ಕೈಗೊಂಡ ನಂತರ ನಗರದ ತಾಲೂಕು ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟ್ಂಗೆ ಮಹಿಳೆಯ ಮೃತದೇಹ ರವಾನಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಮಂಜುನಾಥ ಎಂಬುವವರು ಪೋರ್ಸ್ಟ್ ಮಾರ್ಟ್ಂ ಮಾಡಲು 2000ರೂಪಾಯಿ ಕೊಡುವಂತೆ ಮೃತ ಮಹಿಳೆಯ ಪತಿ ಹನುಮಂತರಾಯ ಅವರಿಗೆ ಲಂಚ ಕೇಳಿದ್ದಾರೆ. ಮಹಿಳೆಯ ಪತಿ ಹಾಗೆಹೀಗೆ ಹಣ ಹೊಂದಿಸಿಕೊಂಡು 1500 ರೂಪಾಯಿ ಸಿಬ್ಬಂದಿಗೆ ಕೊಟ್ಟಿದ್ದಾನೆಂದು ಹೇಳಲಾಗುತ್ತಿದೆ. ಇನ್ನೂ 500 ರೂಪಾಯಿ ಕೊಡದೇ ಇದ್ದರೆ ಪೋಸ್ಟ್ ಮಾರ್ಟ್ಂ ಮಾಡುವುದಿಲ್ಲ ಎಂದು ಸಿಬ್ಬಂದಿ ಮಂಜುನಾಥ ಪಟ್ಟು ಹಿಡಿದಿದ್ದರಿಂದ ರೋಸಿ ಹೋದ ಪತಿ ಹನುಮಂತರಾಯ ಈ ವಿಷಯವನ್ನು ಸಂಘಟನೆಯವರ ಗಮನಕ್ಕೆ ತಂದಿದ್ದಾನೆಂದು ಹೇಳಲಾಗುತ್ತಿದೆ. ಸಿಬ್ಬಂದಿಯ ಮೊಂಡುತನ ಹಾಗೂ ದುರ್ವರ್ತನೆಯನ್ನು ಖಂಡಿಸಿ ಕರ್ನಾಟಕ ಪ್ರಾಂತ ಕೂಲಿಕಾರರ ಸಂಘದ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ಅರಿತ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಾಗರಾಜ್ ಕಾಟ್ವಾ, ಪ್ರತಿಭಟನಾ ನಿರತರೊಂದಿಗೆ ಮಾತನಾಡಿ, ತಪ್ಪಿತಸ್ಥ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಘಟಕದ ಅಧ್ಯಕ್ಷ ಶಂಕ್ರಪ್ಪ ಕೆಂಗಲ್, ಮೃತಳ ಪತಿ ಹನುಮಂತರಾಯ, ಸಿದ್ದಪ್ಪ, ಮೌನೇಶ, ಶರಣಪ್ಪ ಕೆಂಗಲ್