ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 15
ಸಿಂಧನೂರು ತಾಲೂಕಿನ ಗುಂಜಳ್ಳಿ ಹೋಬಳಿಯ 3 ಹಾಗೂ ತುರ್ವಿಹಾಳ ಹೋಬಳಿಯ 3 ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ 19 ಗ್ರಾಮಗಳನ್ನು ಮಸ್ಕಿ ತಾಲೂಕಿಗೆ ಸೇರಿಸುವ ಪ್ರಕ್ರಿಯೆಯನ್ನು ಕೈಬಿಟ್ಟು, ಈ ಹಿಂದಿನಂತೆ ಎಲ್ಲಾ ಗ್ರಾಮಗಳನ್ನು ಸಿಂಧನೂರು ತಾಲೂಕಿನಲ್ಲೇ ಯಥಾರೀತಿ ಮುಂದುವರಿಸಬೇಕು. ಇಲ್ಲದೇ ಹೋದರೆ ಆಯಾ ಗ್ರಾಮಸ್ಥರು ಸೇರಿ ನಮ್ಮ ಸಂಘಟನೆಯೊಂದಿಗೆ ತಹಸಿಲ್ ಕಾರ್ಯಾಲಯದ ಮುಂದೆ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ರವಾನಿಸಲಾಯಿತು.
ನಾಲ್ಕೆöÊದು ಕಿ.ಮೀನಲ್ಲಿ ಸಿಂಧನೂರಿದ್ದರೂ 40 ಕಿ.ಮೀ ಸುತ್ತಬೇಕೇ ? : ಮಂಜುನಾಥ ಗಾಣಗೇರ ಕಿಡಿ
“ಮಸ್ಕಿ ತಾಲೂಕು ಕೇಂದ್ರವು ಈ ಮೇಲೆ ತಿಳಿಸಿದ ಗ್ರಾಮಗಳಿಂದ ಸುಮಾರು 40 ರಿಂದ 50 ಕಿ.ಮೀ ಅಂತರದಲ್ಲಿದ್ದು, ಸಾರಿಗೆ ಸಂಪರ್ಕ ಸಮಸ್ಯೆಯಿಂದಾಗಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೀವ್ರ ತೊಂದರೆಯಾಗಲಿದೆ. ಈ ಮೇಲಿನ ಗ್ರಾಮಗಳಿಗೆ ಸಿಂಧನೂರು ತಾಲೂಕು ಕೇಂದ್ರವು ಅತ್ಯಂತ ಸಮೀಪದಲ್ಲಿದ್ದು, ಆಡಳಿತಾತ್ಮಕವಾಗಿ ಹಾಗೂ ಇನ್ನಿತರೆ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ಜನರಿಗೆ ಬಹಳಷ್ಟು ಸುಲಭವಾಗಿರುತ್ತದೆ. ಮಸ್ಕಿ ತಾಲೂಕು ಕೇಂದ್ರ ಇನ್ನೂ ಪೂರ್ಣ ಪ್ರಮಾಣದ ಸರ್ಕಾರಿ ಕಚೇರಿಗಳನ್ನು ಹೊಂದಿಲ್ಲ, ಅಷ್ಟೇ ಅಲ್ಲದೇ ಶೈಕ್ಷಣಿಕವಾಗಿಯೂ ಇನ್ನೂ ಸುಧಾರಿಸಿಲ್ಲ. ತಾಲೂಕು ಆಸ್ಪತ್ರೆ ಇದುವರೆಗೂ ನಿರ್ಮಾಣವಾಗದಿರುವುದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಮಾತ್ರ ಇರುತ್ತದೆ. ಹತ್ತು ಹಲವು ತೊಡಕುಗಳಿಂದ ಕೂಡಿದ ಮಸ್ಕಿ ತಾಲೂಕು ಆಡಳಿತಕ್ಕೆ ಈ ಗ್ರಾಮಗಳನ್ನು ಏಕಾಏಕಿ ಸೇರಿಸುವುದರಿಂದ ಜನಸಾಮಾನ್ಯರನ್ನು ಬೆಂಕಿಯಿAದ ಬಾಣಲೆಗೆ ತಳ್ಳಿದಂತಾಗುತ್ತದೆ. ಅವೈಜ್ಞಾನಿಕ ತೀರ್ಮಾನದಿಂದ ಜನರು ಆರ್ಥಿಕವಾಗಿ ಸಮಸ್ಯಗೀಡಾಗುವುದಲ್ಲದೇ, ಕೆಲಸ ಕಾರ್ಯಗಳನ್ನು ಬಿಟ್ಟು ದಿನಗಟ್ಟಲೇ ದೂರದಲ್ಲಿರುವ ಮಸ್ಕಿ ತಾಲೂಕು ಕೇಂದ್ರಕ್ಕೆ ಅಲೆದಾಡಬೇಕಾಗುತ್ತದೆ” ಎಂದು ಕರವೇ ಸ್ವಾಭಿಮಾನಿ ಬಣದ ಅಧ್ಯಕ್ಷ ಮಂಜುನಾಥ ಗಾಣಗೇರ ಆಕ್ರೋಶ ವ್ಯಕ್ತಪಡಿಸಿದರು.
ಮಸ್ಕಿಗೆ ಸೇರಿಸುವುದು ಗ್ರಾಮಸ್ಥರಿಗೆ ಹೊರೆಯಾಗಲಿದೆ : ಅಯ್ಯಪ್ಪ ಮೇಟಿ
“ಗ್ರಾಮಸ್ಥರ ಅಭಿಪ್ರಾಯ, ಮನವಿಗೆ ಬೆಲೆ ಕೊಡದೇ ಏಕಾಏಕಿ ಅವೈಜ್ಞಾನಿಕ ತೀರ್ಮಾನ ತೆಗೆದುಕೊಳ್ಳುವುದರಿಂದ ರೈತರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವಯೋವೃದ್ಧರು ಮತ್ತು ವಿಕಲಚೇತರನ್ನು ಸಮಸ್ಯೆಗೀಡುಮಾಡಿದಂತಾಗುತ್ತದೆ. ಹಾಗಾಗಿ ಮಸ್ಕಿ ತಾಲೂಕು ಕೇಂದ್ರಕ್ಕೆ ಸದರಿ ಹಳ್ಳಿಗಳು ಸೇರಿಸುವ ಪ್ರಕ್ರಿಯೆನ್ನು ಕೈಬಿಡಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇವೆ. ಈ ಕುರಿತು ಮಾನ್ಯ ಚುನಾಯಿತ ಜನಪ್ರತಿನಿಧಿಗಳು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಶಿಫಾರಸು ಪತ್ರವನ್ನು ನೀಡಿದ್ದು, ಈ ಕುರಿತು ಮಾನ್ಯ ರಾಯಚೂರು ಜಿಲ್ಲಾಧಿಕಾರಿಗಳು ಸಂಬAಧಿಸಿದ ಮಾನ್ಯ ಮಸ್ಕಿ ಹಾಗೂ ಮಾನ್ಯ ಸಿಂಧನೂರು ತಹಸೀಲ್ದಾರ್ ಅವರಿಗೆ ವರದಿ ನೀಡುವಂತೆ ಸೂಚಿಸಿರುವುದು ತಿಳಿದುಬಂದಿರುತ್ತದೆ. ಆಯಾ ತಾಲೂಕು ತಹಸೀಲ್ದಾರ್ ಅವರಿಂದ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವ ಪ್ರಕ್ರಿಯೆ ನಡೆದಿರುತ್ತದೆ. ಹಾಗಾಗಿ ಮಸ್ಕಿ ತಾಲೂಕು ಕೇಂದ್ರ ವ್ಯಾಪ್ತಿಗೆ ಸೇರಿಸುವ ಪ್ರಕ್ರಿಯೆ ಅವೈಜ್ಞಾನಿಕವಾಗಿದೆ” ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಯ್ಯಪ್ಪ ಮೇಟಿ ಅಸಮಾಧಾನ ವ್ಯಕ್ತಪಡಿಸಿದರು.
“ಜನಪ್ರತಿನಿಧಿಗಳು ಗೊಂದಲ ಮೂಡಿಸುವುದನ್ನು ಕೈಬಿಡಲಿ”
“ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು, ಉಭಯ ತಾಲೂಕಿನ ಮಾನ್ಯ ಶಾಸಕರುಗಳು, ಮಾನ್ಯ ಜಿಲ್ಲಾಧಿಕಾರಿಗಳು, ಮಾನ್ಯ ಮಸ್ಕಿ, ಸಿಂಧನೂರು ತಹಸೀಲ್ದಾರ್ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ವಿನಾಃಕಾರಣ ಜನರನ್ನು ತೊಂದರೆಗೀಡು ಮಾಡುವ ನಿರ್ಧಾರವನ್ನು ತೆಗೆದುಕೊಳ್ಳದೇ ಈ ಪ್ರಕ್ರಿಯೆನ್ನು ಕೂಡಲೇ ತಡೆ ಹಿಡಿಯಬೇಕು. ಒಂದು ವೇಳೆ ಈ ಬಗ್ಗೆ ನಿರ್ಲಕ್ಷö್ಯ ವಹಿಸಿದ್ದೇ ಆದಲ್ಲಿ, ನಮ್ಮ ಸಂಘಟನೆ ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ಸಿಂಧನೂರು ತಹಸಿಲ್ ಕಾರ್ಯಾಲಯದ ಮುಂದೆ ಆದೇಶ ಹಿಂಪಡೆಯುವವರೆಗೂ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಈ ಕುರಿತು 15 ದಿನಗಳ ಒಳಗಾಗಿ ಕ್ರಮ ಕೈಗೊಳ್ಳಬೇಕು ಇಲ್ಲದೇ ಹೋದಲ್ಲಿ ಯಾವುದೇ ರೀತಿಯ ಬೇಜವಾಬ್ದಾರಿ ನಿರ್ಲಕ್ಷö್ಯತನಕ್ಕೆ ಜಿಲ್ಲಾಡಳಿತವೇ ಹೊಣೆಯಾಗಿರುತ್ತದೆ” ಎಂದು ಸಂಘಟನೆಯ ಪದಾಧಿಕಾರಿಗಳು ಹೇಳಿದರು.
ಬೇಡಿಕೆಗಳು: ಸಿಂಧನೂರು ತಾಲೂಕಿನ ಗುಂಜಳ್ಳಿ ಹೋಬಳಿಯ 3 ಗ್ರಾಮ ಪಂಚಾಯಿತಿ ಹಾಗೂ ತುರ್ವಿಹಾಳ ಹೋಬಳಿಯ 3 ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ 19 ಗ್ರಾಮಗಳನ್ನು ಮಸ್ಕಿ ತಾಲೂಕಿಗೆ ಸೇರಿಸುವ ಪ್ರಕ್ರಿಯೆಯನ್ನು ಕೈಬಿಟ್ಟು, ಈ ಹಿಂದಿನAತೆ ಸಿಂಧನೂರು ತಾಲೂಕಿನಲ್ಲೇ ಎಲ್ಲಾ ಗ್ರಾಮಗಳನ್ನು ಯಥಾರೀತಿ ಮುಂದುವರಿಸಬೇಕು, ಜಿಲ್ಲಾ ಉಸ್ತುವಾರಿ ಸಚಿವರು, ಸಿಂಧನೂರು, ಮಸ್ಕಿ ಕ್ಷೇತ್ರಗಳ ಶಾಸಕರು ವಿನಾಃಕಾರಣ ಗ್ರಾಮಸ್ಥರ ಅಭಿಪ್ರಾಯಕ್ಕೆ ವಿರುದ್ಧವಾಗಿ ಯಾವುದೇ ರೀತಿಯ ಗೊಂದಲದ ಶಿಫಾರಸುಗಳನ್ನು ಮಾಡುವುದನ್ನು ಕೈಬಿಟ್ಟು, ಸದರಿ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸಬೇಕು, ಮಾನ್ಯ ಜಿಲ್ಲಾಧಿಕಾರಿಗಳು ತಹಸೀಲ್ದಾರ್ ಅವರಿಗೆ ನೀಡಿದ ಆದೇಶವನ್ನು ಹಿಂಪಡೆಯಬೇಕು, ತಹಸೀಲ್ದಾರ್ ಅವರ ವರದಿಯನ್ನು ಪರಿಗಣಿಸಬಾರದು ಎಂಬ ಬೇಡಿಕೆಗಳುಳ್ಳ ಮನವಿಪತ್ರವನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ವಿವಿಧ ಪದಾಧಿಕಾರಿಗಳು, ವಿವಿಧ ಗ್ರಾಮಗಳ ಗ್ರಾಮಸ್ಥರು ಇದ್ದರು.
