ಸಿಂಧನೂರು: ಎರಡನೇ ಬೆಳೆಗೆ ನೀರು, ಬೆಳೆನಷ್ಟ ಪರಿಹಾರಕ್ಕೆ ಆಗ್ರಹಿಸಿ ನ.4ರಂದು ರೈತ ಸಂಘ, ಕೆಪಿಆರ್‌ಎಸ್‌ನಿಂದ ಪ್ರತಿಭಟನೆ

Spread the love

ಲೋಕಲ್‌ ನ್ಯೂಸ್‌: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ನವೆಂಬರ್‌ 04

ತುಂಗಭದ್ರಾ ಅಣೆಕಟ್ಟೆಯಿಂದ ಎಡದಂಡೆ ಮುಖ್ಯ ಕಾಲುವೆಗೆ ಎರಡನೇ ಬೆಳೆಗೆ ನೀರು ಹರಿಸಬೇಕು ಹಾಗೂ ಭತ್ತ, ಜೋಳದ ಖರೀದಿಕೇಂದ್ರಗಳನ್ನು ಡಿಸೆಂಬರ್ 1ರಿಂದಲೇ ಆರಂಭಿಸಬೇಕು ಹಾಗೂ ಅತಿವೃಷ್ಟಿಯಿಂದ ಹಾನಿಗೀಡಾದ ಭತ್ತ, ತೊಗರಿ, ಹತ್ತಿ, ಸಜ್ಜೆ ಬೆಳೆಗಾರರಿಗೆ ಬೆಳೆ ಪರಿಹಾರ ನೀಡಬೇಕು ಸೇರಿದಂತೆ ಇನ್ನಿತರೆ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ 04-11-2025ರಂದು ನಗರದ ಪ್ರವಾಸಿ ಮಂದಿರದಿಂದ ತಹಸಿಲ್‌ ಕಚೇರಿವರೆಗೆ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ & ಹಸಿರು ಸೇನೆಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್‌ ಅವರ ಮೂಲಕ ಸಿಎಂ ಅವರಿಗೆ ಮನವಿಪತ್ರ ರವಾನಿಸಲಾಗುವುದು ಎಂದು ಸಂಘಟನೆಯ ಪ್ರಮುಖರಾದ ಅಮೀನ್‌ಪಾಷಾ ದಿದ್ದಿಗಿ ಹಾಗೂ ಬಸವಂತರಾಯಗೌಡ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ತುಂಗಭದ್ರಾ ಅಣೆಕಟ್ಟೆಯಿಂದ 2ನೇ ಬೆಳೆಗೆ ಎಡದಂಡೆ ಮುಖ್ಯ ನಾಲೆಗೆ ನೀರು ಹರಿಸಬೇಕು, ಮಾನವ ಶ್ರಮ ಒಳಗೊಂಡ ಉತ್ಪಾದನಾ ವೆಚ್ಚ ಮತ್ತು ಭೂಮಿ ಬಾಡಿಗೆ ಆಧರಿಸಿ ಬೆಳೆ ನಷ್ಟದ ಪರಿಹಾರ ನಿಗದಿ ಮಾಡಿ ರೈತರ ಖಾತೆಗೆ ಶೀಘ್ರ ಜಮಾ ಮಾಡಬೇಕು, ಡಿಸೆಂಬರ್ 1ರಿಂದಲೇ ಭತ್ತ, ಜೋಳದ ಖರೀದಿ ಕೇಂದ್ರಗಳನ್ನು ಆರಂಭಿಸಿ ಬೆಂಬಲ ಬೆಲೆ ಯೋಜನೆಡ ಅಡಿಯಲ್ಲಿ ಫಸಲನ್ನು ಖರೀದಿ ಮಾಡಬೇಕು, ಬೆಳೆ ನಷ್ಟಕ್ಕೀಡಾದ ರೈತರಿಗೆ ಸಾಲ ಮರುಪಾವತಿಗೆ ಬ್ಯಾಂಕ್‌ಗಳು ಕಿರುಕುಳ ನೀಡುವುದನ್ನು ತಪ್ಪಿಸಬೇಕು, ಜೋಳದ ಖರೀದಿಯನ್ನು 15 ಕ್ವಿಂಟಲ್‌ಗೆ ನಿಗದಿಪಡಿಸಿದ್ದು, ಇದನ್ನು ರದ್ದುಪಡಿಸಿ ಮೊದಲಿನಂತೆ ಎಕರೆ 20 ಕ್ವಿಂಟಲ್ ಖರೀದಿಗೆ ನಿಗದಿಪಡಿಸಿ ಆದೇಶ ಹೊರಡಿಸಬೇಕು, ಹೊಸದಾಗಿ ರೈತರು ಪಂಪಸೆಟ್‌ಗೆ ಅರ್ಜಿ ಸಲ್ಲಿಸಿದರೆ, ಎಲ್ಲಾ ಸಾಮಗ್ರಿಗಳನ್ನು ಉಚಿತವಾಗಿ ಪೂರೈಸಬೇಕು ಸೇರಿದಂತೆ ಇನ್ನಿತರೆ ಹಕ್ಕೊತ್ತಾಯಗಳಿಗೆ ಆಗ್ರಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *