ಸಿಂಧನೂರು: ಭೀಮಾ ಕೊರೆಗಾಂವ್ ಯುದ್ಧ ವಿಜಯೋತ್ಸವ ನಿಮಿತ್ತ ಪಥ ಸಂಚಲನ

Spread the love

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 01

ಭೀಮಾ ಕೋರೆಗಾಂವ್ 208ನೇ ವಿಜಯೋತ್ಸವದ ನಿಮಿತ್ತ, ಭೀಮಾ ಕೊರೆಗಾಂವ್ ಯುದ್ಧ ವಿಜಯೋತ್ಸವ ಆಚರಣಾ ಸಮಿತಿ ವತಿಯಿಂದ ನಗರದ ತಾಲೂಕು ಪಂಚಾಯಿತಿಯ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯಿಂದ, ಪಿಡಬ್ಲುö್ಯಡಿ ಕ್ಯಾಂಪ್‌ನ ಅಂಬೇಡ್ಕರ್ ವೃತ್ತದವರೆಗೆ ಗುರುವಾರ ಜೈಬೀಮ್ ರೆಜಿಮೆಂಟ್ ಪಥ ಸಂಚಲನ ನಡೆಯಿತು.

Namma Sindhanuru Click For Breaking & Local News

ನೂರಾರು ಕಾರ್ಯಕರ್ತರು ಜೈಬೀಮ್ ಘೋಷವಾಕ್ಯವುಳ್ಳ ನೀಲಿ ಧ್ವಜಗಳನ್ನಿಡಿದು ಭೀಮಾ ಕೊರೆಗಾಂವ್ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರ ಘೋಷಣೆಗಳನ್ನು ಹಾಕುತ್ತಾ ಗಾಂಧಿಸರ್ಕಲ್, ಕನಕದಾಸ ಸರ್ಕಲ್, ಕಿತ್ತೂರು ರಾಣಿ ಚನ್ನಮ್ಮಸರ್ಕಲ್ ಹಾಗೂ ಯಲ್ಲಮ್ಮ ಗುಡಿ ಮುಂಬಾಗದ ಹೆದ್ದಾರಿ ಮೂಲಕ ಪಿಡಬ್ಲುö್ಯಡಿ ಕ್ಯಾಂಪಿನ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್‌ಗೆ ಸಾಗಿದರು. ಪಥಸಂಚಲನದಲ್ಲಿ ಮುಖಂಡರಾದ ಎಂ.ಗಂಗಾಧರ, ಎಂ.ಮರಿಯಪ್ಪ, ಅಮರೇಶ ಗಿರಿಜಾಲಿ, ಮೌನೇಶ ಜಾಲವಾಡಗಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Namma Sindhanuru Click For Breaking & Local News
Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *