ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 22
ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರು, ನಿರ್ವಾಹಕರ ಮೇಲೆ ಮಹಾರಾಷ್ಟçದಲ್ಲಿ ಪುಂಡರು ದೌರ್ಜನ್ಯ ನಡೆಸಿರುವುದನ್ನು ಖಂಡಿಸಿ, ಬೆಳಗಾವಿ ಜಿಲ್ಲೆಯ ಕೆಲ ಸರ್ಕಾರಿ ಕಚೇರಿಗಳಲ್ಲಿನ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸಿದವರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿ ಹಾಗೂ 17 ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ಬಂದ್ ಕರೆಯ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಶನಿವಾರ ಮನವಿ ರವಾನಿಸಲಾಯಿತು.
ನಗರದ ಬಸವ ಸರ್ಕಲ್‌ನಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡರು ಮತ್ತು ಕಾರ್ಯಕರ್ತರು ಬಸ್ ನಿಲ್ದಾಣದ ಮುಂಭಾಗದ ರಸ್ತೆ, ಗಾಂಧಿಸರ್ಕಲ್ ಮೂಲಕ ಸಾಗಿ ತಹಸೀಲ್ ಕಾರ್ಯಾಲಯಕ್ಕೆ ತೆರಳಿದರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಚಾಲಕ-ನಿರ್ವಾಹಕರ ಮೇಲೆ ದಾಳಿ ನಡೆಸಿದ ಮಹಾರಾಷ್ಟçದ ಪುಂಡರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ರಕ್ಷಣಾ ವೇದಿಕೆಯ ಅಧ್ಯಕ್ಷ ಜಿ.ಸುರೇಶ ಗೊಬ್ಬರಕಲ್, ನಗರಾಧ್ಯಕ್ಷ ದಾವಲ್‌ಸಾಬ್ ದೊಡ್ಡಮನಿ, ಮುಖಂಡರಾದ ಶರಣಪ್ಪ ಉಪ್ಪಲದೊಡ್ಡಿ, ಹನುಮೇಶ ತಿಪ್ಪನಹಟ್ಟಿ, ಶ್ರೀಕಾಂತ ರೆಡ್ಡಿ, ಆಂಜನೇಯ್ಯ ದೇಸಾಯಿ, ವಿಜ್ನೇಶ ಕೆಂಗಲ್, ಮಹಿಬೂಬಸಾಬ್ ಕೆಂಗಲ್, ಆಂಜನೇಯ್ಯ ಸೋಮಲಾಪುರ, ಆದಪ್ಪ ಮೇಸ್ತಿç, ಖಾದರ್‌ಬಾಷಾ ಸಾಲಗುಂದಾ, ಅಮರೇಶ ಸುಲ್ತಾನಪುರ, ಕೆ.ಭಾಷಾಸಾಬ್, ಬಸವರಾಜ ಸಾಸಲಮರಿಕ್ಯಾಂಪ್, ಅಯ್ಯಪ್ಪ ಮೇಟಿ, ಸುರೇಶ ಸಾಸಲಮರಿಕ್ಯಾಂಪ್, ಬಸವರಾಜ ಸುಲ್ತಾನಪುರ, ರಾಘವೇಂದ್ರ, ರಂಗಣ್ಣ ಸಾಸಲಮರಿಕ್ಯಾಂಪ್, ರವಿಕುಮಾರ ಹಿರೇಮಠ, ಶಿವು ಚೌಹಾಣ್, ದೇವಣ್ಣ ಬಾದರ್ಲಿ, ಮಂಜುನಾಥ ಸಾಸಲಮರಿ, ವೆಂಕಟೇಶ ಮುದಗಲ್, ರವಿಕುಮಾರ್ ಎಚ್, ಬಸವರಾಜ ಹೂಗಾರ ಸೇರಿದಂತೆ ಇನ್ನಿತರರಿದ್ದರು.