ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 5
ಜುಲೈ 9ರಂದು ಕಾರ್ಮಿಕರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಬೆಂಬಲಿಸಿ, ಅಂದು ಕೆಲಸವನ್ನು ಬಹಿಷ್ಕರಿಸಿ ಎಐಟಿಯುಸಿ ಸಂಯೋಜಿತ ಹಮಾಲರ ಸಂಘ ಚಳವಳಿಯಲ್ಲಿ ಪಾಲ್ಗೊಳ್ಳಲಿದೆ ಎಂದು ತಾಲೂಕು ಅಧ್ಯಕ್ಷ ಬಾಷುಮಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಸಂಘಟಿತ-ಅಸAಘಟಿತ ಕಾರ್ಮಿಕರ ರಾಜ್ಯ ಹಾಗೂ ರಾಷ್ಟçಮಟ್ಟದ ಕಾರ್ಮಿಕ ಬೇಡಿಕೆಗಳಿಗಾಗಿ ಒತ್ತಾಯಿಸಿ ನಡೆಸಲಾಗುತ್ತಿರುವ ಮುಷ್ಕರದಲ್ಲಿ ಹಮಾಲರ ಬೇಡಿಕೆಗಳ ಈಡೇರಿಕೆಗಾಗಿ ಹಮಾಲರು ಹಾಗೂ ಮಹಿಳೆಯರು ಪಾಲ್ಗೊಳ್ಳಲಿದ್ದಾರೆ. ಮುಷ್ಕರವು ಬೆಳಿಗ್ಗೆ 6 ಗಂಟೆಯಿAದ ಸಂಜೆ 4 ಗಂಟೆಯವರೆಗೂ ನಡೆಯಲಿದೆ.” ಎಂದು ಅವರು ತಿಳಿಸಿದ್ದಾರೆ. ಈ ಕುರಿತು ಅವರು, ಎಪಿಎಂಸಿ ಕಾರ್ಯದರ್ಶಿ ಸಿಂಧನೂರು ಹಾಗೂ ವರ್ತಕರ ಸಂಘಕ್ಕೂ ಪತ್ರ ಬರೆದು ಗಮನ ಸೆಳೆದಿದ್ದಾರೆ. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ವೆಂಕನಗೌಡ ಗದ್ರಟಗಿ, ಉಪಾಧ್ಯಕ್ಷ ಹನುಮಂತಪ್ಪ.ಎಚ್, ಮುಖಂಡರಾದ ಅಮರೇಶ ನಾಯಕ, ನಾಗರಾಜ ಎ.ಕೆ.ಜಿ, ಕಾರ್ಯದರ್ಶಿ ಗಂಗಣ್ಣ ಜಿ, ಖಜಾಂಚಿ ಶಿವಪ್ಪ ಗದ್ರಟಗಿ, ಉಪಾಧ್ಯಕ್ಷ ಮುಕ್ತಂಸಾಬ್ ಇನ್ನಿತರರಿದ್ದರು.