ಸಿಂಧನೂರು: ಇಂದು ಟೌನ್‌ಹಾಲ್‌ನಲ್ಲಿ ನಟ ಪ್ರಕಾಶ್‌ ರಾಜ್‌ರ ನಿರ್ದಿಂಗತ ತಂಡದಿಂದ ‘ತಿಂಡಿಗೆ ಬಂದ ತುಂಡೇರಾಯʼ ನಾಟಕ ಉಚಿತ ಪ್ರದರ್ಶನ

Spread the love

ನಮ್ಮ ಸಿಂಧನೂರು , ಡಿಸೆಂಬರ್‌ 12
ರಂಗ ಕನಸು ರಂಗ ಕೇಂದ್ರ (ರಿ) ಮಂಡಲಗೇರಾ ಆಯೋಜಿಸಿ, ನಿರ್ದಿಗಂತ ಪ್ರಸ್ತುತಪಡಿಸುವ ಜರ್ಮನಿಯ ಕವಿ, ನಾಟಕಕಾರ ಬ್ರೆಕ್ಟ್‌ನ ‘ಆರ್ತೂರೋ ವುಯಿ’ ಆಧಾರಿತ ರಂಗಕೃತಿ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಉಚಿತ ಪ್ರದರ್ಶನ ನಗರದ ಟೌನ್‌ಹಾಲ್‌ನಲ್ಲಿ ಡಿಸೆಂಬರ್ 12ರಂದು ಸಂಜೆ 6 ಗಂಟೆ ಏರ್ಪಡಿಸಲಾಗಿದೆ ಎಂದು ಸಮುದಾಯದ ಶರಬಣ್ಣ ನಾಗಲಾಪುರ, ಮನುಜ ಮತ ಬಳಗದ ಬಸವರಾಜ ಬಾದರ್ಲಿ ಹಾಗೂ ಸಾಲಿಡಾರಟಿ ಯೂತ್ ಮೂವ್‌ಮೆಂಟ್‌ನ ಡಾ.ವಸೀಮ್ ಅವರು ತಿಳಿಸಿದ್ದಾರೆ. ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜ್ವಲಂತ ಸಮಸ್ಯೆಗಳೊಂದಿಗೆ ಹೆಣೆದುಕೊಂಡಿರುವ ಬ್ರೆಕ್ಟ್ನ ನಾಟಕವನ್ನು ರಂಗಕರ್ಮಿ ಶಕೀಲ್ ಅಹ್ಮದ್ ಅವರು ನಿರ್ದೇಶಿಸಿದ್ದಾರೆ. ಈ ನಾಟಕ ಹಲವು ವಾಸ್ತವದ ಸಮಸ್ಯೆಗಳಿಗೆ ಕನ್ನಡಿ ಹಿಡಿಯಲಿದ್ದು, ಖ್ಯಾತ ನಟ ಪ್ರಕಾಶ್‌ರಾಜ್ ಅವರ ನಿರ್ದಿಂಗತ ತಂಡ ಅಭಿನಯಿಸಲಿದೆ. ನಾಟಕ ಉಚಿತ ಪ್ರದರ್ಶನವಿದ್ದು, ರಂಗಾಸಕ್ತರು, ವಿದ್ಯಾರ್ಥಿ, ಯುವಜನರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಅವರು ಮನವಿ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *