ನಮ್ಮ ಸಿಂಧನೂರು , ಡಿಸೆಂಬರ್ 10
ರಂಗ ಕನಸು ರಂಗ ಕೇಂದ್ರ (ರಿ) ಮಂಡಲಗೇರಾ ಆಯೋಜಿಸಿ, ನಿರ್ದಿಗಂತ ಪ್ರಸ್ತುತಪಡಿಸುವ ಜರ್ಮನಿಯ ಕವಿ, ನಾಟಕಕಾರ ಬ್ರೆಕ್ಟ್ನ ‘ಆರ್ತೂರೋ ವುಯಿ’ ಆಧಾರಿತ ರಂಗಕೃತಿ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಉಚಿತ ಪ್ರದರ್ಶನ ನಗರದ ಟೌನ್ಹಾಲ್ನಲ್ಲಿ ಡಿಸೆಂಬರ್ 12ರಂದು ಸಂಜೆ 6 ಗಂಟೆ ಏರ್ಪಡಿಸಲಾಗಿದೆ ಎಂದು ಸಮುದಾಯದ ಶರಬಣ್ಣ ನಾಗಲಾಪುರ, ಮನುಜ ಮತ ಬಳಗದ ಬಸವರಾಜ ಬಾದರ್ಲಿ ಹಾಗೂ ಸಾಲಿಡಾರಟಿ ಯೂತ್ ಮೂವ್ಮೆಂಟ್ನ ಡಾ.ವಸೀಮ್ ಅವರು ತಿಳಿಸಿದ್ದಾರೆ.
ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜ್ವಲಂತ ಸಮಸ್ಯೆಗಳೊಂದಿಗೆ ಹೆಣೆದುಕೊಂಡಿರುವ ಬ್ರೆಕ್ಟ್ನ ನಾಟಕವನ್ನು ರಂಗಕರ್ಮಿ ಶಕೀಲ್ ಅಹ್ಮದ್ ಅವರು ನಿರ್ದೇಶಿಸಿದ್ದಾರೆ. ಈ ನಾಟಕ ಹಲವು ವಾಸ್ತವದ ಸಮಸ್ಯೆಗಳಿಗೆ ಕನ್ನಡಿ ಹಿಡಿಯಲಿದ್ದು, ಖ್ಯಾತ ನಟ ಪ್ರಕಾಶ್ರಾಜ್ ಅವರ ನಿರ್ದಿಂಗತ ತಂಡ ಅಭಿನಯಿಸಲಿದೆ. ನಾಟಕ ಉಚಿತ ಪ್ರದರ್ಶನವಿದ್ದು, ರಂಗಾಸಕ್ತರು, ವಿದ್ಯಾರ್ಥಿ, ಯುವಜನರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಅವರು ಮನವಿ ಮಾಡಿದ್ದಾರೆ.