ಸಿಂಧನೂರು : ಮುಸುಕಿದ ಮೋಡ, ಆಗಾಗ ಜಿನಿ ಜಿನಿ ಮಳೆ

Spread the love

ನಮ್ಮ ಸಿಂಧನೂರು, ಏಪ್ರಿಲ್ 20
ನಗರದಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಆಗಾಗ ಜಿನಿ ಜಿನಿ ಮಳೆ ಸುರಿಯಿತು. ತಾಲೂಕಿನ ಹಾರಾಪುರ, ಎಲೆಕೂಡ್ಲಿಗಿ, ಬಸಾಪುರ, ಕುನಟಗಿ, ಪಗಡದಿನ್ನಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮ ಹಾಗೂ ಕ್ಯಾಂಪ್‌ಗಳಲ್ಲಿ ಬೆಳಿಗ್ಗೆ 9 ಗಂಟೆ ಸುಮಾರು ನೆಲ ತೋಯ್ಯುವಷ್ಟು ಸಾಧಾರಣ ಮಳೆ ಸುರಿಯಿತು. ಮಧ್ಯಾಹ್ನ 12.30 ಮೋಡ ಕವಿದ ವಾತಾವರಣವಿದ್ದುದರಿಂದ ಸೂರ್ಯ ಕಂಡುಬರಲಿಲ್ಲ. ಸತತ ಬಿಸಿಲ ಧಗೆಯಿಂದ ರೋಸಿ ಹೋಗಿದ್ದ ಜನರು ತಂಪನೆ ವಾತಾವರಣ ಅನುಭವಿಸಿದರು.

Namma Sindhanuru Click For Breaking & Local News
ಸಿಂಧನೂರು ತಾಲೂಕಿನ ಎಲೆಕೂಡ್ಲಿಗಿ ಸಮೀಪದ ಬೆಳಿಗ್ಗೆ ಸಾಧಾರಣ ಮಳೆ ಸುರಿಯಿತು.
Namma Sindhanuru Click For Breaking & Local News
ಸಿಂಧನೂರು ನಗರದ ಹಳ್ಳದ ದಂಡೆಯ ಬಳಿ ಮೋಡದ ಮುಸುಕಿದ ವಾತಾವರಣ ಕಂಡುಬಂದಿದ್ದು ಹೀಗೆ.

Spread the love

Leave a Reply

Your email address will not be published. Required fields are marked *