ನಮ್ಮ ಸಿಂಧನೂರು ಮಾರ್ಚ್ 27
ನಗರದ ಗಾಂಧಿ ಸರ್ಕಲ್ ಬಳಿಯಿರುವ ಭಾರತ್ ಮೊಬೈಲ್ ಜೋನ್‌ನಲ್ಲಿ ಗುರುವಾರ ಒಪ್ಪೊ ಎಫ್ 29 ಹೊಸ ಸಿರೀಸ್ ಮೊಬೈಲ್ ಅನ್ನು ಡಿಸ್ಟಿçಬ್ಯೂಟರ್ ಅಶೋಕ ಚಲಾನಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಈ ವೇಳೆ ವಾಣಿಜ್ಯೋದ್ಯಮಿ ಆನಂದ್, ಆರ್‌ಎಸ್‌ಎಂ ವಾಹಿದ್ ಪಾಷಾ, ಎಎಸ್‌ಎಂ ಹರ್ಷದ್ ಹುಸೇನ್, ಎಸ್‌ಎಲ್ ಮೃತ್ಯುಂಜಯ, ಅಂಗಡಿ ಮಾಲೀಕ ಮನೋಜ್ ಇತರರು ಇದ್ದರು.
ಈ ಮೊಬೈಲ್ ವಿಶೇಷತೆ ಏನು ?
“ಅತಿ ಉಷ್ಣತೆ ಹಾಗೂ ಅತೀ ತೇವಾಂಶವನ್ನು ಈ ಮೊಬೈಲ್ ತಡೆದುಕೊಳ್ಳುತ್ತದೆ” ಎಂದು ಕಂಪನಿಯವರು ಗ್ರಾಹಕರಿಗೆ ತಿಳಿಸಿದರು. ಕಂಪನಿಯ ಉದ್ಯೋಗಿಗಳು ಪ್ರಾತ್ಯಕ್ಷಿಕೆಯ ಮೂಲಕ ಮೊಬೈಲ್ ಮೇಲೆ ಬಿಸಿನೀರು ಹಾಕಿ ತೋರಿಸಿದರೆ, ಮಂಜುಗಡ್ಡೆ (ಐಸ್)ಯಲ್ಲಿ ಇಟ್ಟ ಒಪ್ಪೊ ಎಫ್ 29 ಹೊಸ ಸಿರೀಸ್ ಮೊಬೈಲ್‌ನ್ನು ಸುತ್ತಿಗೆಯಿಂದ ಐಸ್ ಒಡೆದು ಹೊರ ತೆಗೆಯಲಾಯಿತು. ಇದನ್ನು ಗಮನಿಸಿದ ಗ್ರಾಹಕರು ಹುಬ್ಬೇರಿಸಿದರು.