ಸಿಂಧನೂರು: ಎನ್ನೆಸ್ಸೆಸ್ ಶಿಬಿರ ಬದುಕಿಗೆ ಪ್ರೇರಣೆ : ಮಂಜುಳಾ ಪ್ರಭುರಾಜ್ ಅಭಿಮತ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 22

ಶಾಲಾ-ಕಾಲೇಜು ಹಂತದಲ್ಲಿ ಎನ್ನೆಸ್ಸೆಸ್ ಶಿಬಿರದಲ್ಲಿ ಪಾಲ್ಗೊಳ್ಳುವುದರಿಂದ ಶಿಸ್ತು, ಸಂಯಮ, ಆತ್ಮವಿಶ್ವಾಸ ಮೂಡುತ್ತದೆ. ತಿಳಿವಳಿಕೆ ವಿಸ್ತಾರಗೊಂಡು ಬದುಕಿಗೆ ಪ್ರೇರಣೆ ಒದಗಿಸುತ್ತದೆ ಎಂದು ನಗರಸಭೆ ಉಪಾಧ್ಯಕ್ಷ ಮಂಜುಳಾ ಪ್ರಭುರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಶಾರದಾ ಮಹಿಳಾ ಪದವಿ ಮಹಾವಿದ್ಯಾಲಯದಿಂದ ಮೂರನೇ ಮೈಲ್ ಕ್ಯಾಂಪ್ ಕರಿಬಸವನಗರದಲ್ಲಿ ಹಮ್ಮಿಕೊಂಡಿದ್ದ ಎನ್ನೆಸ್ಸೆಸ್ ವಿಶೇಷ ಶಿಬಿರದಲ್ಲಿ ಉದ್ದೇಶಗಳ ಫಲಕ ಅನಾವರಣಗೊಳಿಸುವ ಮೂಲಕ ಶನಿವಾರ ಅವರು ಮಾತನಾಡಿದರು. ಎನ್ನೆಸ್ಸೆಸ್ ಶಿಬಿರ ಗ್ರಾಮೀಣ ಪರಿಸರ, ಜನಜೀವನ, ಕಷ್ಟ-ನಷ್ಟಗಳನ್ನು ಪರಿಚಯಿಸುತ್ತದೆ. ಇದನ್ನು ಸೂಕ್ಷö್ಮವಾಗಿ ಗಮನಿಸಿ ಪರಿಹಾರಕ್ಕೆ ಮುಂದಾಗುವವರು ನಾಯಕರಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ಶಿಬಿರದ ಸಾನ್ನಿಧ್ಯ ವಹಿಸಿದ್ದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಮುಖ್ಯ ಅತಿಥಿಗಳಾದ ಅಣ್ಣಪ್ಪ ಮೇಟಿ ಗೌಡ, ಸ್ಥಳೀಯ ಸರ್ಕಾರಿ ಶಾಲೆಯ ಮಖ್ಯ ಶಿಕ್ಷಕಿ ಶರಣಮ್ಮ, ಕಾಲೇಜಿನ ಡಾ.ಬಸವರಾಜ ಬಾದರ್ಲಿ, ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ದೊಡ್ಡಬಸವ ಹಿರೇಮಠ್ ಮಾತನಾಡಿದರು. ಇಂದಿನಿAದ ಮಾರ್ಚ್ 28ರವರೆಗೆ 7 ದಿನಗಳ ಕಾಲ ಎನ್ನೆಸ್ಸೆಸ್ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ಶಾರದಾ ಮಹಿಳಾ ಕಾಲೇಜಿನ ಉಪನ್ಯಾಸಕರು, ಹಾಗೂ ಎನ್ನೆಸ್ಸೆಸ್ ಶಿಬಿರಾರ್ಥಿಗಳು ಇದ್ದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *