ನಮ್ಮ ಸಿಂಧನೂರು, ಜೂನ್ 26
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ವ್ಯಾಪ್ತಿಯ ನಂ.54ನೇ ವಿತರಣಾ ಕಾಲುವೆಯಲ್ಲಿ ದಿನಾಂಕ: 26.06.2024ರಂದು ನೀರಿನ ಪ್ರಮಾಣ ಇಳಿಕೆಯಾಗಿದ್ದು ಕಂಡುಬಂತು. ಕುಡಿಯುವ ನೀರಿನ ಉದ್ದೇಶಕ್ಕೆ ಜೂನ್ 15ರಿಂದ ಮುಖ್ಯ ಕಾಲುವೆಗೆ ನೀರು ಹರಿಸಲಾಗುತ್ತಿದೆ.ಆದರೆ ವಿತರಣಾ ಕಾಲುವೆಗಳಿಗೆ ಎರಡ್ಮೂರು ದಿನಗಳು ತಡವಾಗಿ ನೀರು ಹರಿಬಿಡಲಾಗಿತ್ತು. ಜೂನ್ 15ರಿಂದ 25ರವರೆಗೆ ನೀರು ಹರಿಸುವುದಾಗಿ ಹೇಳಲಾಗಿತ್ತು, ಆದರೆ ಇನ್ನೂ ಕೆಲ ಗ್ರಾಮದ ಕೆರೆಗಳು ಪೂರ್ಣಗೊಳ್ಳದ ಕಾರಣ ಮುಖ್ಯ ಕಾಲುವೆ ಸೇರಿದಂತೆ ವಿತರಣಾ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ
ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 26-06-2024 ಬುಧವಾರದಂದು 604 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಜಲಾಶಯದಲ್ಲಿ ಇಂದು 5.13 ಟಿಎಂಸಿ ನೀರು ಸಂಗ್ರಹವಿದ್ದರೆ, 1995 ಕ್ಯೂಸೆಕ್ ನೀರು ಹೊರಗೆ ಬಿಡಲಾಗುತ್ತಿದೆ. ಇದೇ ದಿನ ಕಳೆದ ವರ್ಷ ಜಲಾಶಯದಲ್ಲಿ 4.06 ಟಿಎಂಸಿ ನೀರು ಸಂಗ್ರಹವಿದ್ದರೆ, 228 ಕ್ಯೂಸೆಕ್ ನೀರು ಒಳಹರಿವಿತ್ತು, 1328 ಕ್ಯೂಸೆಕ್ ನೀರು ಹೊರಗೆ ಹರಿಬಿಡಲಾಗಿತ್ತು.