ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 24
ವೀರಶೈವ ಪಂಚಮಸಾಲಿ ಸಮುದಾಯದ ನಗರ ಘಟಕದ ನೂತನ ಅಧ್ಯಕ್ಷರಾಗಿ ನೇಮಕವಾದ ನಾಗರಾಜ್ ಗಸ್ತಿ ಹಾಗೂ ಕರ್ನಾಟಕ ಮುಸ್ಲಿಂ ಸಂಘ (ಮುಸ್ಲಿಂ ಪರ ಸಂಘಟನೆಗಳ ಒಕ್ಕೂಟ)ದ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಮಹಮ್ಮದ್ ಫಯಾಜ್ ಅಹಮದ್ ಅವರನ್ನು ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವೀರೇಶ ಬಾವಿಮನಿ, ಎಂ.ಡಿ.ಫಾರೂಕ್, ಮುದಿಯಪ್ಪ ಡೈಮಂಡ್, ಶ್ರೀಧರ್, ಶೇಖ್ ರಾಜಾ ಹುಸೇನ್, ಸೈಯ್ಯದ್ ಸಲೀಮ್ ಕೋಟೆ, ಹುಸೇನ್‌ಬಾಷಾ, ನಿಂಗರಾಜ್ ಪೋತೂರು, ನಿಂಗರಾಜ.ಬಿ, ದಿನೇಶ್ ಶೆಟ್ಟಿ, ಕರುಣಾ, ಮಹೆಬೂಬ್, ಸಾದಿಕ್, ಬಾಬಾ ಕೋಟೆ, ಪ್ರಶಾಂತ್ ಸೇರಿದಂತೆ ಇನ್ನಿತರರಿದ್ದರು.
