ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 01
ಶಾಸಕ ಹಂಪನಗೌಡ ಬಾದರ್ಲಿ ಅವರು ಗುರುವಾರ ತಮ್ಮ ಜನ್ಮದಿನದಂದು ಸುಕ್ಷೇತ್ರ ಅಂಬಾಮಠಕ್ಕೆ ಬೆಳಿಗ್ಗೆಯೇ ಭೇಟಿ ನೀಡಿ ಅಂಬಾದೇವಿಯ ದರ್ಶನ ಪಡೆದರು. ನಂತರ ದೇವಸ್ಥಾನ ಆವರಣ, ರಥಬೀದಿ ಪ್ರಾಂಗಣ ಸೇರಿದಂತೆ ವಿವಿಧೆಡೆ ನಡೆಯುತ್ತಿರುವ ಕೆಲಸ ಕಾರ್ಯಗಳನ್ನು ವೀಕ್ಷಿಸಿದರು.

ಸುಕ್ಷೇತ್ರದ ಪ್ರಾಂಗಣದ ರಸ್ತೆ ಬಳಿ ಸಸಿ ನಾಟಿ
ಶಾಸಕರು ಸುಕ್ಷೇತ್ರದ ಪ್ರಾಂಗಣದ ರಸ್ತೆಗಳ ಬಳಿ ವಿವಿಧ ಬಗೆಯ ಸಸಿಗಳನ್ನು ನೆಟ್ಟರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಅರುಣ ದೇಸಾಯಿ, ನಗರಸಭೆ ಪೌರಾಯುಕ್ತ ಪಾಂಡುರAಗ ಇಟಗಿ, ತಾಲೂಕು ಪಂಚಾಯಿತಿ ಇಒ ಚಂದ್ರಶೇಖರ, ಸ್ತ್ರೀಶಕ್ತಿ ಸಂಘದ ಶ್ರೀದೇವಿ ಶ್ರೀನಿವಾಸ, ಜಿ.ಪಂ.ಮಾಜಿ ಸದಸ್ಯ ಬಸವರಾಜ ಹಿರೇಗೌಡರ್, ಆರ್.ಸಿ.ಪಾಟೀಲ್, ವನಸಿರಿ ಫೌಂಡೇಶನ್‌ನ ಅಮರೇಗೌಡ ಮಲ್ಲಾಪುರ, ಅರಣ್ಯ ಇಲಾಖೆಯ ಅಧಿಕಾರಿಗಳು, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಇದ್ದರು.


