ನಮ್ಮ ಸಿಂಧನೂರು, ಏಪ್ರೀಲ್ 6
ಸಿಂಧನೂರು-ಮಸ್ಕಿ ರಾಷ್ಟ್ರೀಯ ಹೆದ್ದಾರಿ 150ಎ ನಲ್ಲಿ ರಂಗಾಪುರ ಬಳಿ ಇರುವ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ನ.54ನೇ ಉಪ ಕಾಲುವೆಯ ಬ್ರಿಡ್ಜ್ (ಸೇತುವೆ) ತಡೆಗೋಡೆ ಕಳೆದ ಒಂದು ವರ್ಷದಿಂದ ಶಿಥಿಲಗೊಂಡಿದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಿದೆ. ಈ ರಸ್ತೆಯು ಕಲಬುರಗಿ, ಯಾದಗಿರಿ, ಬೀದರ, ಬಾಗಲಕೋಟ, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದ್ದು ಬ್ರಿಡ್ಜ್ ಶಿಥಿಲಗೊಂಡು ಹಲವು ದಿನಗಳು ಕಳೆದರೂ ದುರಸ್ತಿಗೆ ಸಂಬಂಧಿಸಿದ ಇಲಾಖೆಯವರು ಗಮನಹರಿಸಿಲ್ಲ ಎಂದು ವಾಹನ ಸವಾರರು ಹಾಗೂ ಸಾರ್ವಜನಿಕರು ದೂರಿದ್ದಾರೆ.