ಸಿಂಧನೂರು: ಮಾನ್ಯಾ ಮರ್ಯಾದೆಗೇಡು ಹತ್ಯೆ ಪ್ರಕರಣ, ತಪ್ಪಿತಸ್ಥರ ಮೇಲೆ ಕಠಿಣ ಶಿಕ್ಷೆಗೆ ಜನವಾದಿ ಮಹಿಳಾ ಸಂಘಟನೆ ಆಗ್ರಹ

Spread the love

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 26

ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದ ಗರ್ಭಿಣಿ ಯುವತಿ ಮಾನ್ಯಾ ಪಾಟೀಲ ಅವರನ್ನು ಹತ್ಯೆಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಶುಕ್ರವಾರ ಜನವಾದಿ ಮಹಿಳಾ ಸಂಘಟನೆಯಿಂದ ಮನವಿಪತ್ರ ರವಾನಿಸಲಾಯಿತು.
ದಲಿತ ಯುವಕ ವಿವೇಕಾನಂದ ದೊಡ್ಡಮನಿಯನ್ನು ಮದುವೆಯಾಗಿದ್ದ ಮಾನ್ಯಾ ಏಳು ತಿಂಗಳ ಗರ್ಭಿಣಿಯಾಗಿದ್ದಳು. ಇತ್ತೀಚೆಗೆ ಊರಿನ ಪತಿಯ ಮನೆಗೆ ಬಂದಿದ್ದ ವೇಳೆ, ಅನ್ಯ ಜಾತಿಯ ಯುವಕನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕೆ ಏಳು ತಿಂಗಳ ಗರ್ಭಿಣಿ ಮಗಳನ್ನೇ ತಂದೆ ಕೊಡಲಿಯಿಂದ ಕೊಚ್ಚಿ ಕೊಂದಿರುವ ಕ್ರೂರ ಘಟನೆಯನ್ನು ಮಾನವೀಯ ನಾಗರೀಕ ಸಮಾಜ ಸಹಿಸುವುದಿಲ್ಲ. ಎಂಟು ಶತಮಾನಗಳ ಹಿಂದೆಯೇ ಬಸವಣ್ಣನವರು ಅಂತರ್ಜಾತಿ ವಿವಾಹ ನೆರವೇರಿಸಿ ಜಾತೀಯತೆ ಹೋಗಲಾಡಿಸಲು ಅಡಿಪಾಯ ಹಾಕಿದ್ದರು. ಸಮಾಜದಲ್ಲಿ ಇಂದಿಗೂ ಮೇಲ್ಜಾತಿಯವರ ಅಟ್ಟಹಾಸ, ಜಾತಿ ತಾರತಮ್ಯ, ಜಾತಿದ್ವೇಷ, ಅಸ್ಪೃಶ್ಯತೆ ಆಚರಣೆ, ದಲಿತರನ್ನು ಒಪ್ಪಿಕೊಳ್ಳಲಾಗದಂತ ಮನಸ್ಥಿತಿ ಆಳವಾಗಿ ಬೇರೂರಿದೆ ಎಂಬುವುದಕ್ಕೆ ಈ ಘಟನೆ ಜ್ವಲಂತ ಸಾಕ್ಷಿಯಾಗಿದೆ. ಗರ್ಭಿಣಿಯಾದ ತನ್ನ ಮಗಳನ್ನೇ ಅಮಾನುಷವಾಗಿ ತಂದೆಯೇ ಕೊಲ್ಲುವ ಜಾತಿ ಪ್ರತಿಷ್ಠೆಯು ಘನ ಘೋರವಾಗಿದೆ. ಈ ಜಾತಿ ತಾರತಮ್ಯ, ಜಾತಿ ದ್ವೇಷ, ಅಸ್ಪೃಶ್ಯತೆ ನಿರ್ಬೀಜಗೊಳಿಸದೇ ಸಮಾಜದ ಬೆಳವಣಿಗೆ ಮತ್ತು ಸಾಮರಸ್ಯ ತರಲು ಸಾಧ್ಯವಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
‘ಕಠಿಣ ಕಾನೂನು ಜಾರಿಗೆ ತನ್ನಿ’
ಮುಂದೆ ಈ ರೀತಿ ಘಟನೆಗಳು ನಡೆಯದಂತೆ ಈಗಾಗಲೇ ಅವಮರ್ಯಾದಾ ಹತ್ಯೆಗೆ ಸಂಬAಧಿಸಿದAತೆ ಸುಪ್ರೀಂ ಕೋರ್ಟ್ ಹಲವು ಮಹತ್ವದ ಆದೇಶಗಳನ್ನು ನೀಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ದೇಶದ ಸರ್ವೊಚ್ಚ ನ್ಯಾಯಾಲಯದ ಆದೇಶಗಳನ್ನು ಬದ್ಧತೆಯಿಂದ ಪಾಲಿಸುವ ಮೂಲಕ ಸಮಾಜದಲ್ಲಿ ಮರ್ಯಾದೆಗೇಡು ಹತ್ಯೆಯ ವಿರುದ್ದ ಕಠಿಣ ಕಾನೂನು ಜಾರಿಗೆ ತರಬೇಕು. ಅವಮರ್ಯಾದಾ ಹತ್ಯೆಗಳ ವಿರುದ್ಧ ಜನಸಮುದಾಯಗಳನ್ನ ಸಂವೇದಾನಾಶೀಲಗೊಳಿಸಲು ಸರ್ಕಾರ ಮುಂದಾಗಬೇಕು. ಅವಮರ್ಯಾದಾ ಹತ್ಯೆಗಳನ್ನ ಪ್ರೋತ್ಸಾಹಿಸುವ, ಸಹಕರಿಸುವ, ಸಹಾಯ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಯಾವ ಜಿಲ್ಲೆಯಲ್ಲಿ ಹೆಚ್ಚು ಅವಮರ್ಯಾದಾ ಹತ್ಯೆಗಳು ಮತ್ತೆ ಮತ್ತೆ ಮರಕಳಿಸುತ್ತಿದೆಯೊ ಆ ಜಿಲ್ಲೆಯ ಜಿಲ್ಲಾಡಳಿತ ವಿಶೇಷ ಮುತುವರ್ಜಿ ವಹಿಸಿ ಜನಜಾಗೃತಿ ಕಾರ್ಯಕ್ರಮಗಳನ್ನ ಸಂಘಟಿಸಬೇಕು. ಮಹಿಳೆಯರ ಮೇಲಾಗುವ ಎಲ್ಲ ತರಹದ ದೌರ್ಜನ್ಯಗಳನ್ನು ತಡೆಗಟ್ಟಲು ನ್ಯಾ.ಜಿ.ಎಸ್ ವರ್ಮಾ ಸಮಿತಿಯ ಹಾಗೂ ಉಗ್ರಪ್ಪ ಸಮಿತಿಯ ಮಹಿಳಾ ಪರ ಕಾನೂನು ಶಿಫಾರಸುಗಳನ್ನು ತ್ವರಿತವಾಗಿ ಹಾಗೂ ಸಮರ್ಪಕವಾಗಿ ಜಾರಿಗೊಳಿಸಬೇಕೆಂದು ಸಂಘಟನೆಯವರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಗಿರಿಜಾ ಕಿಲ್ಲೇದ್, ಸಿದ್ಧೇಶ್ವರಿ, ನಾಗರತ್ನ ತುರುವಿಹಾಳ, ಮಲ್ಲಮ್ಮ, ಮನ್ನಮ್ಮ ಸೂರ ದೇವಮ್ಮ ದಡೇಸಗೂರು, ಪದ್ಮಾ, ಹುಸೇನಮ್ಮ, ಪಾರ್ವತಿ, ಖಿಜಾಬನಿ, ಜೈನಮ್ಮ, ಹುಸೇನಿಬೀ, ಭಿಮಮ್ಮ ತುರವಿಹಾಳ, ಉಮಾಕ್ಷಿ, ಲಲಿತಮ್ಮ, ಲಕ್ಷಿö್ಮ, ಶರಣಮ್ಮ, ಅಪ್ಪಣ್ಣ ಕಾಂಬಳೆ, ಬಸವಂತರಾಯಗೌಡ, ಆದನಗೌಡ, ಹುಸೇನಪ್ಪ ಭಾಗವಹಿಸಿದ್ದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *